HomeCrime Newsನಾಳೆ ಡಿ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ: ಜಾಮೀನು ಅರ್ಜಿ ಸಲ್ಲಿಸುತ್ತಾರಾ ದರ್ಶನ್?

ನಾಳೆ ಡಿ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ: ಜಾಮೀನು ಅರ್ಜಿ ಸಲ್ಲಿಸುತ್ತಾರಾ ದರ್ಶನ್?

For Dai;y Updates Join Our whatsapp Group

Spread the love

ಬೆಂಗಳೂರು: ನಟ ದರ್ಶನ್ ಅವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಿ ಇಂದಿಗೆ 11 ದಿನಗಳು ಆಗುತ್ತಿವೆ. ಈ 11 ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಜೊತೆಗೆನಾಳೆ‌ಗೆ ದರ್ಶನ್ 13 ದಿನಗಳ ಕಸ್ಟಡಿ ಅಂತ್ಯವಾಗುತ್ತಿದೆ. ಹೀಗಾಗಿ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ.

ವಿಡಿಯೋ ಸಂವಾದ ಮೂಲಕ ದರ್ಶನ್ ಕೋರ್ಟ್ ಗೆ ಹಾಜರಾಗಲಿದ್ದಾನೆ. ಬೆಂಗಳೂರು 24ನೇ ACMM ಕೋರ್ಟ್‌ ವಿಚಾರಣೆ ನಡೆಸಲಿದೆ. ವಿಡಿಯೋ ಕಾನ್ಫರೆನ್ಸ್ ಹಾಲ್ ಬದಲಾಗಿ ಹೈ ಸೆಕ್ಯುರಿಟಿ ಸೆಲ್‌ನಿಂದಲೇ ನಾಳೆ ಮದ್ಯಾಹ್ನ ಕೋರ್ಟ್‌ಗೆ ಹಾಜರಾಗಲಿದ್ದಾರೆ.  ಇನ್ನೂ ತಮ್ಮ ಪ್ರಕರಣದ ಚಾರ್ಜ್ ಶೀಟ್‌ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ದರ್ಶನ್‌ ಕಳೆದ ವಾರ ಟಿವಿಗಾಗಿ ವಿನಂತಿಸಿದ್ದರು.

ಬೆಂಗಳೂರು ಪೊಲೀಸರು ಪ್ರಕರಣ ಸಂಬಂಧ ಈಗಾಗಲೇ  ದರ್ಶನ್‌ ಸೇರಿದಂತೆ 17 ಮಂದಿಯ ವಿರುದ್ಧ 3,991 ಪುಟಗಳ ಬೃಹತ್‌ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ. ದರ್ಶನ್‌ ಮತ್ತು ಪವಿತ್ರ ಗೌಡ ಸೇರಿದಂತೆ ಸಹ ಆರೋಪಿಗಳು ಈಗ ರಾಜ್ಯಾದ್ಯಂತ ವಿವಿಧ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಆರೋಪಪಟ್ಟಿ ಸಲ್ಲಿಸಿದಾಗಿನಿಂದ ದರ್ಶನ್ ಸಾಕಷ್ಟು ಒತ್ತಡದಲ್ಲಿದ್ದಾನೆ ಎಂದು ವರದಿ ತಿಳಿಸಿದೆ.

ಈಗಾಗಲೇ ದರ್ಶನ್ ಬೇಲ್ ವಿಚಾರವಾಗಿ ದರ್ಶನ್, ಪತ್ನಿ ಹಾಗೂ ಸಹೋದರ ದಿನಕರ್ ಜೊತೆ ಚರ್ಚೆ ಮಾಡಿದ್ದಾರೆ. ಇತ್ತೀಚೆಗೆ ಬಳ್ಳಾರಿ ಜೈಲಿಗೆ ಕುಟುಂಬ ಭೇಟಿ ನೀಡಿದ ಸಂದರ್ಭದಲ್ಲಿ ಚಾರ್ಜ್​​ಶೀಟ್​ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳ್ಳಾರಿ ಜೈಲಿನಲ್ಲಿಯೇ ದರ್ಶನ್ ಜಾಮೀನು ಅರ್ಜಿಗೆ ಸಹಿ ಮಾಡಿದ್ದಾರೆ. ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಲು ವಕೀಲರು ಸಕಲ ಸಿದ್ಧತೆ ಮಾಡಿಕೊಂಡಿದ್ದು. ಎಸಿಎಂಎಂ ಕೋರ್ಟ್​ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!