ಹುಬ್ಬಳ್ಳಿ:- ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು. ಇದೇ ನನ್ನ ಕನಸು ಎಂದು ವರೂರಿನ ಜೈನ ಮುನಿ ಹೇಳಿದ್ದಾರೆ.
ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆನ್ನುವುದು ನನ್ನ ಕನಸು. ಎಷ್ಟೇ ಕಾಟ ಇರಲಿ, ಎಷ್ಟೇ ಸಂಕಟ ಇರಲಿ ಡಿಕೆಶಿ ಸಿಎಂ ಆಗುತ್ತಾರೆ. ಇದು ನಮ್ಮ ಭವಿಷ್ಯವಾಣಿ ಎಂದು ವರೂರಿನ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ.
ಮುಂದಿನ ಅವಧಿಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಕಷ್ಟಪಟ್ಟಷ್ಟು ಯಾರೂ ಪಟ್ಟಿಲ್ಲ. ಕಾಂಗ್ರೆಸ್‌ಗೆ ಮರುಜೀವ ಕೊಟ್ಟಿದ್ದಾರೆ, ಇದನ್ನು ಕರ್ನಾಟಕ ಜನರು ಮರೆತಿಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆಗುವುದು ನಮ್ಮ ಕನಸು ಎಂದು ಜೈನಮುನಿ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ.
ಜೈನ ಸಮುದಾಯಕ್ಕೆ ಕೊಡುವುದು ಗೊತ್ತು, ಬೇಡುವುದು ಗೊತ್ತಿಲ್ಲ. ಆದರೆ, ಈಗ ನಿಗಮ ಮಂಡಳಿಗೆ ಬೇಡುತ್ತಿದ್ದೇವೆ, ಇದು ಸಮಾಜದ ಅಪೇಕ್ಷೆ ಎಂದು ಹುಬ್ಬಳ್ಳಿಯ ವರೂರಿನ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ.