ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಗುರು ಪುಟ್ಟರಾಜ ಕಲಾಪೋಷಕ ಸಂಘದ ಸಹಾಯಾರ್ಥವಾಗಿ ಡಿಸೆಂಬರ್ 13 ಮತ್ತು 14ರಂದು `ಮುಠ್ಠಾಳ ಮಾವ’ ಎನ್ನುವ ನಾಟಕ ಪ್ರದರ್ಶನಗೊಳ್ಳಲಿದ್ದು, ತನ್ನ ಅಭಿನಯದ ಮೂಲಕವೇ ರಾಜ್ಯದ ಮನೆಮಾತಾಗಿರುವ ಚಿತ್ರನಟಿ ಮಂಥನಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಮರಡ್ಡಿ ಕ್ಯಾಂಪೌಂಡ್ನಲ್ಲಿನ ಶ್ರೀ ಗುರು ಸಿದ್ದಲಿಂಗೇಶ್ವರ ನಾಟಕ ಕಂಪನಿಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಗುರು ಪುಟ್ಟರಾಜ ಕಲಾಪೋಷಕ ಸಂಘದ ಗೌರವಾಧ್ಯಕ್ಷ ಎಫ್.ವ್ಹಿ. ಮರಿಗೌಡ್ರ ತಿಳಿಸಿದರು.
ನಗರದ ಚನ್ನಮ್ಮ ಭವನದಲ್ಲಿ ಶ್ರೀ ಗುರು ಪುಟ್ಟರಾಜ ಕಲಾ ಪೋಷಕ ಸಂಘದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮದು ಹೋರಾಟದ ಸಂಘವಲ್ಲ. ರಂಗಭೂಮಿ ಕಲೆಯನ್ನು ಉಳಿಸುವ ಸಂಘವಾಗಿದೆ. ಕಳೆದ 10 ವರ್ಷದಿಂದ ಪುಟ್ಟರಾಜ ಕಲಾಪೋಷಕ ಸಂಘವನ್ನು ಬೆಳೆಸಿದ್ದೇವೆ. ಕೋರೊನಾ ಸಮಯದಲ್ಲಿ ವೀರೇಶ್ವರ ಪಂಚಾಕ್ಷರ ಮಠದಿಂದ ದವಸ-ಧಾನ್ಯ ಸಂಗ್ರಹಿಸಿ ಕಲಾವಿದರಿಗೆ ಸಹಾಯ ಮಾಡಿದ್ದೇವೆ. ರಂಗಭೂಮಿ ಕಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಆ ನಿಟ್ಟಿನಲ್ಲಿ ಶ್ರೀ ಗುರು ಪುಟ್ಟರಾಜ ಕಲಾಪೋಷಕ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಅರಳಿ, ಸಂಗಮೇಶ ಬಿಳಗಿ, ಪ್ರಭುಸ್ವಾಮಿ ಹಿರೇಮಠ, ಅಮರೇಶ್ ನಾಗೂರ, ಮುಸ್ತಾಕ್ ಡಾಲಾಯತ್, ಬಾಬುಗೌಡ ಪಾಟೀಲ್, ಮಹೇಂದ್ರ ಪಾಲರೇಶಾ, ಶರೀಫ ಬಿಳೆಯಲಿ, ಕುಮಾರ ಅರಳಿಹಳ್ಳಿ, ಪಾಪು ಲಿಂಗರಾಜ ಕಲ್ಲೂರ, ದುದ್ದುಗೌಡ ಪಾಟೀಲ, ಮಹಾಂತೇಶ್ ಚನ್ನಣ್ಣವರ್, ವಿನಾಯಕ ಕೌಜಗೇರಿ, ಮಹಾದೇವ ಹೊಸೂರ, ಪಂಚು ಹೂಗಾರ, ಮಹಾಂತೇಶ್ ಸಜ್ಜನರ, ಆನಂದ್ ಬೆಂಗಳೂರು, ಧರ್ಮರಾಜ್ ಈರಪ್ಪ ನಾಗಠಾಣ, ರಮೇಶ ಮುಮಡವಾಡ, ಸುದೀರಸಿಂಗ್ ದೊಡ್ಡಮನಿ, ಅಮರಗುಂಡಪ್ಪ ಬಿಜ್ಜಲ್, ರಾಘವೇಂದ್ರ ಎಸ್.ಕೊಳ್ಳಿ, ಹಜರೆಸಾಬ್ ಚಿತ್ತವಾಡಗಿ, ಮಂಟೇಶ ಕಲ್ಲೂರ, ರವಿ ಹುಚ್ಚಣ್ಣನವರ, ಖಾಸೀಮಸಾಬ್ ಹವಾಲ್ದಾರ್, ಇಲಿಯಾಸ್ ಹೊಸಪೇಟೆ, ಆನಂದ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಗುರು ಪುಟ್ಟರಾಜ ಕಲಾಪೋಷಕ ಸಂಘದ ಅಧ್ಯಕ್ಷ ನಜೀರಸಾಬ್ ಮಜ್ಜಗಿ ಮಾತನಾಡಿ, ಎಫ್.ವ್ಹಿ. ಮರಿಗೌಡ್ರ ಕಲಾಪೋಷಕ ಸಂಘಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರಿಗೆ ಸಾಥ್ ಕೊಡುವ ಕೆಲಸವನ್ನು ನಾವೆಲ್ಲರೂ ಮಾಡುತ್ತಾ ಬಂದಿದ್ದು, ಈಗ ಅವರ ಮಾರ್ಗದರ್ಶನದಲ್ಲಿ ಸಂಘದ ಸದಸ್ಯರು ಪುಟ್ಟರಾಜ ಕಲಾಪೋಷಕ ಸಂಘವನ್ನು ಮತ್ತಷ್ಟು ಉನ್ನತಮಟ್ಟಕ್ಕೆ ಬೆಳೆಸೋಣ. ಜೊತೆಗೆ, ರಂಗಭೂಮಿ ಕಲೆಯನ್ನು ಮುಂದಿನ ಪೀಳಿಗೆಯವರೆಗೂ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡೋಣ ಎಂದರು.



