ವಿಜಯಸಾಕ್ಷಿ ಸುದ್ದಿ, ಗದಗ: ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ನಗರದ ರಾಯಲ್ ಫಂಕ್ಷನ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಹನಮಂತಪ್ಪ ಕಾಕರಗಲ್, ಎಸ್.ಫಕೀರಪ್ಪ ಮುಂಡಗೋಡ, ಬಿ.ಎಸ್. ಗಂಗಾಧರಪ್ಪ ಚಿಕ್ಕಬಳ್ಳಾಪುರ, ರಮೇಶ ಮಾದರ ಬೆಳಗಾವಿ, ಎಸ್.ಎನ್. ಬಳ್ಳಾರಿ ಗದಗ, ಹೇಮಾವತಿ ಹಿರೇಮನಿ ಹುಬ್ಬಳ್ಳಿ, ಪ್ರಕಾಶ ಹೊಸಳ್ಳಿ ಮುಂತಾದವರು ಭಾಗವಹಿಸಿದ್ದರು.
ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಯಲ್ಲಿ ಹೊಸ ಪದಾಧಿಕಾರಿಗಳ ಪದಗ್ರಹಣ ಮಾಡುತ್ತಿದ್ದು, ಗದಗದಲ್ಲಿ ಜಿಲ್ಲಾ ಸಂಚಾಲಕರಾಗಿ ದುರಗಪ್ಪ ಹಾಗೂ ಸಂಘಟನಾ ಸಂಚಾಲಕರಾಗಿ ಸತೀಶ ಎಚ್.ಹೂಲಿ, ರಾಮು ಪಿ.ಬಳ್ಳಾರ, ಸಂಗಪ್ಪ ಹೊಸಮನಿ, ಗದಗ ಶಹರ ಘಟಕದ ಸಂಚಾಲಕರಾಗಿ ಯುವರಾಜ ಬಳ್ಳಾರಿ, ಮಹಿಳಾ ಒಕ್ಕೂಟದ ಸಂಚಾಲಕರಾಗಿ ಸುಶೀಲಾ ಚಲವಾದಿ ಅವರೊಂದಿಗೆ ಎಲ್ಲಾ ತಾಲೂಕಿನ ಹಾಗೂ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಆದೇಶ ಪತ್ರ ನೀಡಲಾಯಿತು ಎಂದು ಯುವರಾಜ ಬಳ್ಳಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.