ದಿನನಿತ್ಯ ಸುಳ್ಳು ಹೇಳುವುದು ಸಿದ್ದರಾಮಯ್ಯರ ರಾಜಕೀಯದ ಭಾಗವಾಗಿದೆ: ಸಿ.ಟಿ ರವಿ

0
Spread the love

ಚಿಕ್ಕಮಗಳೂರು: ದಿನನಿತ್ಯ ಸುಳ್ಳು ಹೇಳುವುದು ಸಿದ್ದರಾಮಯ್ಯರ ರಾಜಕೀಯದ ಭಾಗವಾಗಿದೆ ಎಂದು ಎಂಎಲ್‍ಸಿ ಸಿ.ಟಿ ರವಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾರು, ಯಾವಾಗ, ಯಾರನ್ನ ಖರೀದಿ ಮಾಡಲು ಪ್ರಯತ್ನ ಪಟ್ಟಿದ್ದಾರೆ? ಆಧಾರ ಇದ್ದರೆ ದೂರು ನೀಡಿ. ಸಾಕ್ಷಿ ಇದ್ದರೆ ಆಧಾರ ಸಹಿತವಾಗಿ ನ್ಯಾಯಾಲಯದಲ್ಲಿ ನಿರೂಪಿಸಿ.

Advertisement

ಸಿಎಂ ಸ್ಥಾನದಲ್ಲಿ ಇದ್ದು, ಆ ಸ್ಥಾನದ ಜವಾಬ್ದಾರಿ ಮರೆತು ಕೇವಲ ಆರೋಪ ಮಾಡೋದು ರಾಜಕೀಯ ಪ್ರೇರಿತ. ಬಿಜೆಪಿ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲು ಮಾಡುತ್ತಿರುವ ಆರೋಪ ಎಂದು ಕಿಡಿಕಾರಿದ್ದಾರೆ.

ದಿನನಿತ್ಯ ಸುಳ್ಳು ಹೇಳುವುದು ಸಿದ್ದರಾಮಯ್ಯರ ರಾಜಕೀಯದ ಭಾಗವಾಗಿದೆ. ಸುಳ್ಳು ಹೇಳದೆ ಇದ್ದರೆ ಊಟವೂ ಜೀರ್ಣ ಆಗಲ್ಲ. ರಾತ್ರಿ ನಿದ್ದೆಯೂ ಬರಲ್ಲ. ಸುಳ್ಳಿಂದಲೇ ರಾಜಕೀಯ ಆರಂಭ ಆಗಿ, ಸುಳ್ಳಿಂದಲೇ ನಿಮ್ಮ ದಿನಚರಿ ಅಂತ್ಯ ಆಗುವ ರೀತಿ ಇದೆ. ಸಾಕ್ಷಿ ಇದ್ದರೆ ನಿರೂಪಿಸಿ, ಇಲ್ಲ ಎಂದರೆ ಸಾರ್ವಜನಿಕವಾಗಿ ಕ್ಷೇಮೆ ಕೇಳಿ ಎಂದು ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here