ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ ಗೌರಿ ಗುಡಿ ಓಣಿಯಲ್ಲಿರುವ ಶ್ರೀ ಗೌರಿ ಶಂಕರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ನಿತ್ಯ ರುದ್ರಾಭಿಷೇಕ ಪೂಜೆಯು ಬೆಳಿಗ್ಗೆ 6ರಿಂದ 8 ಗಂಟೆಯವರೆಗೆ ದೇವಸ್ಥಾನದ ಅರ್ಚಕರಾದ ಶ್ರೀ ವೇದಮೂರ್ತಿ ಶರಣಯ್ಯ ವಿ.ಶಿವಪ್ಪಯ್ಯನಮಠ ಇವರಿಂದ ಜರುಗಲಿದೆ.
Advertisement
ಪೂಜಾ ಸೇವೆಯಲ್ಲಿ ಭಾಗವಹಿಸುವವರು ವಿನಾಯಕಸ್ವಾಮಿ ಹಿರೇಮಠ ಇವರಲ್ಲಿ ಹೆಸರು ನೋಂದಾಯಿಸಬೇಕೆಂದು ಸಮಾಜದ ಅಧ್ಯಕ್ಷ ಕಾಶಣ್ಣ ಕುಂದಗೋಳ ಮತ್ತು ಉಪಾಧ್ಯಕ್ಷ ಶರಣಬಸಪ್ಪ (ರಾಜು) ಗುಡಿಮನಿ ಇವರ ವಿನಂತಿಯಂತೆ ದೇವಸ್ಥಾನದ ಟ್ರಸ್ಟ್ ಕಮಿಟಿಯ ಚೇರಮನ್ ಶರಣಪ್ಪ ಅಣ್ಣಿಗೇರಿ ತಿಳಿಸಿದ್ದಾರೆ.