ನಾಳೆ ಸಂಜೆ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ `ನೃತ್ಯ ಸಂಭ್ರಮ’ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಭವಾನಿ ಭರತನಾಟ್ಯ ಹಾಗೂ ವಿವಿಧೋದ್ದೇಶಗಳ ಸಂಸ್ಥೆಯ ವೇದಿಕಾ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನ.30ರಂದು ಸಂಜೆ 4.3ಕ್ಕೆ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ನೃತ್ಯ ಸಂಭ್ರಮ-2024 ನಡೆಯಲಿದೆ.

Advertisement

ಸಂಸ್ಥೆಯ ಅಧ್ಯಕ್ಷ ಮಹಾದೇವಪ್ಪ ಚಕ್ರಸಾಲಿ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ವೀರಯ್ಯಸ್ವಾಮಿ ಬಿ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕ ಡಾ. ಚಂದ್ರು ಲಮಾಣಿ, ಸಿಪಿಐ ನಾಗರಾಜ ಮಾಡಳ್ಳಿ, ಗದಗ ರೈಲ್ವೆ ಇಲಾಖೆ ಶಶಿಧರ ರೊಳ್ಳಿ, ಸುನೀಲ ಮಹಾಂತಶೆಟ್ಟರ, ಧಾರವಾಡ ಕೃಷಿ ವಿ.ವಿ ನಾಮ ನಿರ್ದೇಶಕ ಸದಸ್ಯ ಬಸವರಾಜ ಕುಂದಗೋಳಮಠ ಆಗಮಿಸುವರು.

ವೇದಿಕಾ ನೃತ್ಯ ಶಾಲೆಯ ಶಿಕ್ಷಕಿ ವಿದೂಷಿ ಡಾ. ಹೇಮಾ ವಾಘಮೋಡೆ, ನಿವೃತ್ತ ಶಿಕ್ಷಕ ಐ.ಸಿ. ಹತ್ತಿಕಾಳ ಅವರಿಗೆ ಗುರುವಂದನೆ ನಡೆಯಲಿದೆ. ನೃತ್ಯ ಶಾಲೆ ಶಿಕ್ಷಕಿ ನಯನಾ ದಳವಾಯಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು 30 ನಿಮಿಷಗಳ ಅವಧಿಯ ಕನ್ನಡ ನಾಡು-ನುಡಿ, ಪರಂಪರೆಯ ವೈಭವವನ್ನು ಸಾರುವ ಕರ್ನಾಟಕ ವೈಭವ ವಿಶೇಷ ನೃತ್ಯ ಪ್ರಸ್ತುತಪಡಿಸುವರು ಎಂದು ಶಾಲೆಯ ಕಾರ್ಯದರ್ಶಿ ಸರೋಜಾ ಗೌಡರ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here