ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಹೀಗಾಗಿ ಪ್ರತಿವರ್ಷ ವಿಜೃಂಭಣೆಯಿಂದ ದುಭಾರಿ ಕಾರುಗಳಿಗೆ ಪೂಜೆ ಮಾಡುತ್ತಿದ್ದ ದರ್ಶನ್ ಈ ಭಾರಿ ಜೈಲಿನಲ್ಲೇ ಹಬ್ಬ ಆಚರಿಸಿದ್ದಾರೆ. ದರ್ಶನ್ ಇಲ್ಲದ ಹಿನ್ನೆಲೆಯಲ್ಲಿ ಕಾರುಗಳಿಗೆ ಯಾವುದೇ ಪೂಜೆ ನಡೆಸಿಲ್ಲ.
ಆಯುಧ ಪೂಜೆಯ ದಿನ ದರ್ಶನ್ ಮನೆ ಹೊರಗೆ ಸಾಲು ಸಾಲು ದುಬಾರಿ ಕಾರುಗಳನ್ನು ನಿಲ್ಲಿಸಿ ಪೂಜೆ ಮಾಡಿ ಸಂಭ್ರಮಿಸುತ್ತಿದ್ದರು. ಆದರೆ, ಈ ವರ್ಷ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿ ಕಂಬಿ ಹಿಂದೆ ಇದ್ದಾರೆ. ಹೀಗಾಗಿ ಜೈಲಿನಲ್ಲಿ ಅಧಿಕಾರಿಗಳು ಕೊಟ್ಟ ಸಿಹಿ ತಿಂಡಿಯಲ್ಲೇ ದಸಾರ ಸೆಲೆಬ್ರೇಷನ್ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಯುಧ ಪೂಜೆ ನಡೆಸಿ ಎಲ್ಲರಿಗೂ ಸಿಹಿ ಹಂಚಲಾಗಿದೆ. ಅಂತೆಯೇ ದರ್ಶನ್ ಗೆ ಜೈಲು ಸಿಬ್ಬಂದಿ ಸಿಹಿ ನೀಡಿ ಹಬ್ಬದ ಶುಭಾಶಯ ತಿಳಿಸಿದ್ದರು. ಹೊರಗೆ ಹಬ್ಬದ ಸಂಭ್ರಮವಿದ್ದರು ದರ್ಶನ್ ಮಾತ್ರ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಪ್ರತಿದಿನದಂತೆ ಬೆಳಗ್ಗೆ ವಾಕಿಂಗ್ ಮಾಡಿ ಬಳಿಕ ಚಪಾತಿ ಊಟ ಮಾಡಿ ರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.



