ಕೂಲಿಂಗ್ ಗ್ಲಾಸ್ ಧರಿಸಿ ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ: ಅಧಿಕಾರಿಗಳಿಗೆ ಎದುರಾಯ್ತು ಸಂಕಷ್ಟ

0
Spread the love

ಪರಪ್ಪನ ಅಗ್ರಹಾರದಿಂದ ನಟ ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್​​ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳು ಸುರಕ್ಷಿತವಾಗಿ ಅವರನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿದ್ದಾರೆ. 9.45ರ ವೇಳೆಗೆ ಬಳ್ಳಾರಿಗೆ ತಲುಪಿಸಿದ ದರ್ಶನ್​ ಇದೀಗ ಕೇಂದ್ರ ಕಾರಾಗೃಹದ ಒಳ ಸೇರಿದ್ದಾರೆ. ಸದ್ಯ ನಟನಿಗೆ ಹೊಸ ಕೈದಿ ನಂಬರ್​ ಕೂಡ ಜೈಲಾಧಿಕಾರಿಗಳು ನೀಡಿದ್ದಾರೆ.

Advertisement

ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ದರ್ಶನ್​ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ದರ್ಶನ್​ಗೆ ಜೈಲಾಧಿಕಾರಿಗಳಿಂದ ಕೈದಿ ನಂಬರ್​ 6106 ನೀಡಿದ್ದರು. ಆದರೀಗ ಬಳ್ಳಾರಿಗೆ ಶಿಫ್ಟ್​ ಆದ ಬಳಿಕ ಬೇರೆ ನಂಬರ್​ ನೀಡಿದ್ದಾರೆ.

ಇನ್ನೂ ಬೆಂಗಳೂರಿನಿಂದ ಹೊರಟು ಬಳ್ಳಾರಿ ಜೈಲು ತಲುಪಿದ ದರ್ಶನ್​ ಅವರು ಕಾರಾಗೃಹದ ಒಳಗೆ ಎಂಟ್ರಿ ನೀಡುವಾಗ ಸ್ಟೈಲಿಶ್​​ ಲುಕ್​ನಲ್ಲಿ ಕಾಣಿಸಿಕೊಂಡರು. ಅವರಿಗೆ ಕೂಲಿಂಗ್​ ಗ್ಲಾಸ್​ ಧರಿಸಲು ಏಕೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಉದ್ಭವ ಆಗಿದೆ. ಜೈಲಿನ ನಿಯಮಾನುಸಾರ ಮುಖ್ಯ ದ್ವಾರದಲ್ಲಿ ಸ್ವಂತ ವಸ್ತುಗಳನ್ನು ಒಪ್ಪಿಸಬೇಕು.

ಆದರೆ ದರ್ಶನ್​ಗೆ ಕೂಲಿಂಗ್ ಗ್ಲಾಸ್‌ ಧರಿಸಲು ಅನುಮತಿ ನೀಡಿದ್ದರಿಂದ ಕರ್ತವ್ಯಲೋಪ ಆಗಿದೆ. ಈ ಹಿನ್ನೆಲೆಯಲ್ಲಿ, ದರ್ಶನ್ ಅವರನ್ನು ಕರೆತಂದ ಭದ್ರತಾ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಕಾರಾಗೃಹ ಡಿಐಜಿ ಟಿ.ಪಿ. ಶೇಷ ಪತ್ರ ಬರೆದಿದ್ದಾರೆ. ಶಿಸ್ತು ಕ್ರಮ ಜರುಗಿಸಲು ಮಾನ್ಯ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here