ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ದರ್ಶನ್ ಮತ್ತು ಗ್ಯಾಂಗ್ ಗೆ ಈಗ ಮತ್ತೊಮ್ಮೆ ಟೆನ್ಷನ್ ಶುರುವಾಗಿದೆ. 2024ರ ಜೂನ್ ನಲ್ಲಿ ನಡೆದಿದ್ದ ಈ ಕೊಲೆ ಕೇಸಲ್ಲಿ ಇವತ್ತು ಕೋರ್ಟ್ ದೋಷಾರೋಪ ನಿಗದಿ ಪಡಿಸಲಿದೆ.. ಹೀಗಾಗಿ, ದರ್ಶನ್ ಗೆ ಟೆನ್ಷನ್ ಶುರುವಾಗಿದೆ.
ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಇಂದು ಸಿಸಿಎಚ್ 64ರ ನ್ಯಾಯಾದೀಶರ ಮುಂದೆ ಹಾಜರಾಗಲಿದ್ದಾರೆ. ಎಲ್ಲಾ ಆರೋಪಿಗಳ ಹಾಜರಾತಿ ಬಳಿಕ ಚಾರ್ಜಸ್ ಫ್ರೇಮ್ ಪ್ರಕ್ರಿಯೆ ಶುರುವಾಗಲಿದೆ.
ಎ೧ ಆರೋಪಿ ಪವಿತ್ರಾಗೌಡ ಅಂತಾ ಕೂಗಿದಾಗ ಕಟಕಟೆಗೆ ಬರಬೇಕಿದೆ, ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 ಕೊಲೆಯತ್ನ, 364 ಕಿಡ್ನ್ಯಾಪ್, 202 ಸಾಕ್ಷಿನಾಶ ಕೇಸ್ ದಾಖಲಾಗಿದೆ. ಇದನ್ನ ನೀವು ಒಪ್ಕೊತೀರಾ ಅಥವಾ ಅಲ್ಲಗೆಳೆಯುತ್ತೀರಾ ಅಂತಾ ನ್ಯಾಯಾದೀಶರು ಕೇಳಲಿದ್ದಾರೆ. ಇಲ್ಲ ಸ್ವಾಮಿ ಇದೆಲ್ಲಾ ಸುಳ್ಳು ವಿಚಾರಣೆ ನಡೆಯಲಿ ಅಂತಾ ಆರೋಪಿಗಳು ಹೇಳಿಕೆ ನೀಡುವ ಸಾಧ್ಯತೆ ಇದೆ.
ಇದೇ ರೀತಿ ಎಲ್ಲಾ 17 ಆರೋಪಿಗಳನ್ನ ಕರೆದು ಅವರ ಮೇಲೆ ದಾಖಲಾಗಿರೊ ಸೆಕ್ಷನ್ ಬಗ್ಗೆ ನ್ಯಾಯಾಧೀಶರು ವಿವರಣೆ ಕೇಳಲಿದ್ದಾರೆ. ಈ ಪ್ರಕ್ರಿಯೆ ಮುಗಿದ ಮೇಲೆ ದೊಷಾರೋಪ ನಿಗದಿ ಬಳಿಕ ಮುಂದೊಂದು ದಿನ ಟ್ರಯಲ್‌ಗೆ ದಿನಾಂಕ ನ್ಯಾಯಾಧೀಶರು ನಿಗದಿಪಡಿಸಲಿದ್ದಾರೆ. ಇದೇ ವೇಳೆ ಹಾಸಿಗೆ ತಲೆದಿಂಬು ನೀಡುವ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ.



