ಬಳ್ಳಾರಿ ವಿಮ್ಸ್ ವೈದ್ಯರಿಂದ ದರ್ಶನ್ ಆರೋಗ್ಯ ವರದಿ: “ದಾಸ”ನ ಹೆಲ್ತ್ ರಿಪೋರ್ಟ್ʼನಲ್ಲೇನಿದೆ..?

0
Spread the love

ಬಳ್ಳಾರಿ: ನಟ ದರ್ಶನ್ ಅವರು ಈಗ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಬೆನ್ನು ನೋವಿನ ಕಾರಣ ನೀಡಿ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಆರೋಪಿ ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಬಳ್ಳಾರಿ ಜೈಲಧಿಕಾರಿಗಳ ಕೈ ಸೇರಿದೆ.

Advertisement

ಕಳೆದ ವಾರವಷ್ಟೇ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಹಾಗೂ ನ್ಯೂರೋ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ಇದೀಗ ಮೆಡಿಕಲ್ ರಿಪೋರ್ಟ್ ಸಲ್ಲಿಸಿರುವ ವೈದ್ಯರು ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಬೆನ್ನು ನೋವು ನಿಯಂತ್ರಣಕ್ಕೆ ಫಿಜಿಯೋ ಜೊತೆಗೆ ಎರಡು ಬಾರಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು ಹಾಗೂ ಕೆಲವು ಮಾತ್ರೆ, ಮುಲಾಮು ನೀಡುವಂತೆ ಉಲ್ಲೇಖಿಸಿದ್ದಾರೆ.

ವಿಮ್ಸ್ನ ನರರೋಗ ತಜ್ಞ ವೈದ್ಯ ಡಾ.ವಿಶ್ವನಾಥ್ ಸಲ್ಲಿಕೆ ಮಾಡಿರುವ ಮೆಡಿಕಲ್ ರಿಪೋರ್ಟ್ನಲ್ಲಿ ಆರೋಪಿ ದರ್ಶನ್‌ಗೆ ನರಗಳಿಂದ ಬೆನ್ನು ನೋವಾಗುತ್ತಿದೆ ಹೌದು. ಹೀಗಾಗಿ ಇಂದಿನಿಂದಲೇ ಜೈಲಿನಲ್ಲಿ ಫಿಜಿಯೋಥೆರಪಿ ನೀಡಬೇಕು ಎಂದು ಜೈಲಧಿಕಾರಿಗಳಿಗೆ ಸೂಚಿಸಿದ್ದಾರೆ. ಮತ್ತೊಂದೆಡೆ ಮೆಡಿಕಲ್ ಬೆಡ್, ಚೇರ್ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇನ್ನೂ ದರ್ಶನ್ ಮೆಡಿಕಲ್ ರಿಪೋರ್ಟ್‌ನ್ನು ಬಳ್ಳಾರಿ ಜೈಲಧಿಕಾರಿಗಳು ಮೇಲಧಿಕಾರಿಗಳಿಗೆ ಮೇಲ್ ಮಾಡಿದ್ದಾರೆ. ಜೊತೆಗೆ ಮುಂದಿನ ಚಿಕಿತ್ಸಾ ಕ್ರಮ, ಮೆಡಿಕಲ್ ಬೆಡ್, ಚೇರ್, ವೈದ್ಯಕೀಯ ಸಲಕರಣೆ ಹಾಗೂ ಕೆಲವು ಮಾತ್ರೆಗಳ ನೀಡಲು ಸಲಹೆ ಕೇಳಿದ್ದಾರೆ. ಜೈಲು ವಿಭಾಗದ ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕ ಬಳಿಕ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್, ಚೇರ್ ನೀಡುವ ಸಾಧ್ಯತೆಯಿದೆ.

 

 


Spread the love

LEAVE A REPLY

Please enter your comment!
Please enter your name here