ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳೆಲ್ಲ ಇಂದುಸಿಸಿಎಚ್ 57 ಕೋರ್ಟ್ಗೆ ಹಾಜರಾಗಿದ್ದರು. ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳೂ ಕೋರ್ಟ್ಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇದೇ ಕಾರಣಕ್ಕೆ ಇಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲರೂ ಕೋರ್ಟ್ಗೆ ಹಾಜರಾಗಿದ್ದರು.
Advertisement
ಆರೋಪಿ ದರ್ಶನ್ ನನ್ನು ನಟ ಧನ್ವೀರ್ ಕೋರ್ಟ್ ಗೆ ಕರೆದುಕೊಂಡು ಬಂದಿದ್ದಾರೆ. ಕಳೆದ ಬಾರಿ ಬೆನ್ನು ನೋವಿನ ನೆಪ ಹೇಳಿ ಕೋರ್ಟ್ ಗೆ ದರ್ಶನ್ ಗೈರಾಗಿದ್ದರು. ಕೋರ್ಟ್ ಖಡಕ್ ವಾರ್ನಿಂಗ್ ಬೆನ್ನಲ್ಲೇ ಈ ಬಾರಿ ಕೋರ್ಟ್ ಗೆ ಹಾಜರಾಗಿದ್ದಾರೆ. ದರ್ಶನ್ ನಿನ್ನೆಯಷ್ಟೇ ಬಾಲಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆ 22ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.