ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಯಾವ ಒತ್ತಡಕ್ಕೂ ಮಣಿಯದೆ ಖಡಕ್ ತನಿಖೆ ಮಾಡಿದ ಪೊಲೀಸರು ಕೊನೆಗೂ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 83 ದಿನಗಳ ತನಿಖೆಯಲ್ಲಿ ಹಲವು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಕೊಲೆ ಕೇಸ್ನಲ್ಲಿ ದರ್ಶನ್ ಪಾತ್ರ ಏನು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉತ್ತರ ಸಿಕ್ಕಿದೆ.
ಇದರ ಬೆನ್ನಲ್ಲೇ ಕೊಲೆ ಆರೋಪಿ ದರ್ಶನ್ ಬಿಡುಗಡೆಗಾಗಿ ಅವರ ಅಭಿಮಾನಿಗಳು ಫೋಟೋ ಹಿಡಿದು ದೈವದ ಮೊರೆ ಹೋಗಿರುವ ಸನ್ನಿವೇಶ ಬಳ್ಳಾರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಳ್ಳಾರಿಯ ಬಲಕಲ್ ಅನ್ನೋ ಗ್ರಾಮದ ಬೀರಲಿಂಗೇಶ್ವರ ದೈವದ ಬಳಿ ದರ್ಶನ್ ಬಿಡುಗಡೆ ಅಭಿಮಾನಿಗಳು ದಿನಾಂಕ ಕೇಳಿದ್ದಾರೆ.
ಈ ವೇಳೆ ಮೂರು ತಿಂಗಳ ಬಳಿಕ ದರ್ಶನ್ ಹೊರ ಬರ್ತಾರೆ ಅಂತಾ ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿದೆ. ದರ್ಶನ್ ಭಾವಚಿತ್ರದ ಮೇಲೆ ತಲೆಯಿಟ್ಟು ದೈವ ನುಡಿದ ಮಾತಿನ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ದರ್ಶನ್ ಬಿಡುಗಡೆ ಬಗ್ಗೆ ದೈವ ಹೇಳಿದ ಮಾತಿನ ವಿಡಿಯೋ ಮಾಡಿ ಅಭಿಮಾನಿಗಳು ತಮ್ಮ ಇನ್ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.