ಹುಬ್ಬಳ್ಳಿ: ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯೇ ಆಗಿದ್ದರೂ ಜೈಲಿನಲ್ಲಿದ್ದಾಗ ಹೇಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ? ಎಂದು ಸಚಿವ ಜಮೀರ್ ಅಹಮದ್ ಪ್ರಶ್ನಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ನಾನೂ ಬಹಳ ಆತ್ಮೀಯರು.
ಆದರೆ ಈಗ ಅವರು ಜೈಲಿನಲ್ಲಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯೇ ಆಗಿದ್ದರೂ ಜೈಲಿನಲ್ಲಿದ್ದಾಗ ಹೇಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ?. ಪರಪ್ಪನ ಅಗ್ರಹಾರದಲ್ಲಿ ಅವರ ಫೋಟೋ ಸಿಕ್ಕಿರುವುದಕ್ಕೆ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಬರೀ ಜಿಲ್ಲಾ ಉಸ್ತುವಾರಿ ಮಂತ್ರಿ, ಡಿಜಿ ಅಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.



