ಬೆಂಗಳೂರು:- ಜೈಲಿನೊಳಗೆ ಅವ್ಯವಹಾರ ಬಯಲಿಗೆ ಬಂದಾಗ ನಮ್ಮನ್ನು ಯಾಕೆ ಟಾರ್ಗೆಟ್ ಮಾಡುತ್ತೀರಿ ಎಂದು ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯಿಂದಲೇ ಪ್ರತಿಭಟನೆ ನಡೆದಿದೆ.
ಈ ಮೂಲಕ ಪರಪ್ಪನ ಅಗ್ರಹಾರಕ್ಕೆ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕೆಎಸ್‌ಐಎಸ್‌ಎಫ್ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕೇಂದ್ರ ಕಾರಾಗೃಹ ಸಿಬ್ಬಂದಿ ಪ್ರತಿಭಟಿಸಿದ್ದಾರೆ. ನಿನ್ನೆ ಶುಕ್ರವಾರ ಮಧ್ಯಾಹ್ನ ಜೈಲಿನ ಸುಮಾರು 100ಕ್ಕೂ ಹೆಚ್ಚು ಜೈಲಾಧಿಕಾರಿಗಳು, ಸಿಬ್ಬಂದಿ ಪ್ರತಿಭಟಿಸಿದ್ದಾರೆ.
ನಟ ದರ್ಶನ್ ವಿಚಾರ ಅಷ್ಟೇ ಅಲ್ಲದೆ, ಜೈಲಿನ ಯಾವುದೇ ಅವ್ಯವಹಾರ ಬಯಲಿಗೆ ಬಂದಾಗಲೂ ಕೇವಲ ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳೇ ಟಾರ್ಗೆಟ್ ಆಗುತ್ತಿದ್ದಾರೆ. ಮಾಧ್ಯಮಗಳಲ್ಲೂ ಜೈಲು ಸಿಬ್ಬಂದಿ ಬಗ್ಗೆ ಮಾತ್ರ ಸುದ್ದಿಯಾಗುತ್ತಿದೆ.
ಆದರೆ ಜೈಲಿಗೆ ಒಂದು ಇರುವೆ ಬರಬೇಕಾದರೂ ಕರ್ನಾಟಕ ಕೈಗಾರಿಕ ಭದ್ರತಾ ದಳದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಜೈಲಿನ ಸಿಬ್ಬಂದಿಯ ಶೂ, ಬೆಲ್ಟ್ ತೆಗೆಸಿ ಕೆಎಸ್‌ಐಎಸ್‌ಎಫ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ.
ಇಷ್ಟಿದ್ದರೂ ಜೈಲಿನೊಳಗೆ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳ ಹೇಗೆ ಬರುತ್ತಿದೆ. ಅವರ ಕುಮ್ಮಕ್ಕಿನಿಂದ ಇದೆಲ್ಲ ಆಗುತ್ತಿದೆ. ಇಷ್ಟಾದ್ದರೂ ಜೈಲಿನ ಅಧಿಕಾರಿಗಳಿಗೆ ಅಮಾನತ್ತು ಶಿಕ್ಷೆಯಾಗುತ್ತಿದೆ.
ಆದರೆ ಕೆಎಸ್‌ಐಎಸ್‌ಎಫ್ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ಇರಲಿ, ಒಂದು ರೂಲ್ 7 ನೀಡಿ ತನಿಖೆ ಕೂಡ ನಡೆಸುತ್ತಿಲ್ಲ. ಹೀಗೆಂದು ತಮ್ಮ ಅಳಲು ತೋಡಿಕೊಂಡು ಹಿರಿಯ ಅಧಿಕಾರಿಗಳ ಮುಂದೆ ಪ್ರತಿಭಟಿಸಿದ್ದಾರೆ.