ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೈಲಲ್ಲಿ ಐಷಾರಾಮಿ ಜೀವನ ಮಾಡುತ್ತಿರುವ ವಿಡಿಯೋ ಲಭ್ಯವಾಗಿದೆ.
ದರ್ಶನ್ ಮೊಬೈಲ್‌ನ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ಲಭ್ಯವಾಗಿದೆ. ಈಗಾಗಲೇ ನಟ ದರ್ಶನ್ ಜೈಲಿನಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಕುಳಿತು ಕಾಫಿ ಹೀರುತ್ತಾ, ಕೈಯಲ್ಲಿ ಸಿಗರೇಟ್ ಹಿಡಿದು ಸೇದುತ್ತಿರುವ ಫೋಟೋ ವೈರಲ್ ಆಗಿತ್ತು.
ಬಳಿಕ ಜೈಲಿನಲ್ಲಿ ಮೊಬೈಲ್, ಫೋನ್ ಯಾವುದನ್ನೂ ಬಳಸಲು ಅವಕಾಶ ಇಲ್ಲದಿದ್ದರೂ ಜೈಲಿನಲ್ಲಿದ್ದುಕೊಂಡೇ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮೂಲಕ ಹೊರಗಿನವರೊಂದಿಗೆ ಮಾತನಾಡಿದ್ದಾರೆ.
ದರ್ಶನ್ ಜೈಲಿನಲ್ಲಿದ್ದುಕೊಂಡೇ ಹೊರಗಿನವರ ಜೊತೆಗೆ ನಗು ನಗುತ್ತಾ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಜೈಲಿನಲ್ಲಿರುವ ನಟ ದರ್ಶನ್ ಜೊತೆಗೆ ಇನ್‌ಸ್ಟಾಗ್ರಾಂ ವಿಡಿಯೋ ಕಾಲ್ ಮೂಲಕ ಮಾತನಾಡಿದ ಆತನ ಆಪ್ತ ಅದರ ತುಣುಕನ್ನು ಮೊಬೈಲ್‌ನ ಸ್ಟೇಟಸ್‌ಗೆ ಹಾಕಿಕೊಂಡಿದ್ದಾನೆ. ನಂತರ ಅದನ್ನು ಎಚ್ಚೆತ್ತುಕೊಂಡು ಡಿಲೀಟ್ ಮಾಡಿದ್ದಾನೆ. ಆದರೆ, ಅಷ್ಟರೊಳಗೆ ಆ ವಿಡಿಯೋ ಸಂಗ್ರಹ ಮಾಡಿಕೊಂಡಿದ್ದು, ನಮಗೆ ಲಭ್ಯವಾಗಿದೆ.