ಬಳ್ಳಾರಿ:- ಪರಪ್ಪನ ಅಗ್ರಹರದಲ್ಲಿ ರಾಜಾತಿಥ್ಯ ಹಿನ್ನೆಲೆ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿದ್ದಾರೆ.
ಇನ್ನೂ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಕರೆತರುವಾಗ ದರ್ಶನ್ ಕೈಗೆ ಬೇಡಿ ಹಾಕಲಾಗಿತ್ತಾ? ಇಲ್ಲಾ ಎನ್ನುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದೀಗ ಇದಕ್ಕೆ ಖುದ್ದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪ್ರತಿಕ್ರಿಯಿಸಿದ್ದು, ದರ್ಶನ್ ಕೈಯಲ್ಲಿ ಕೋಳ ಇರಲಿಲ್ಲ. ಕೈ ನೋವಾಗಿದ್ದರಿಂದ ಬಟ್ಟೆ ಕಟ್ಟಿದ್ದರು ಎಂದು ಸ್ಪಷ್ಟಪಡಿಸಿದರು.
ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬಳಿಕ ಎಸ್ಪಿ ಶೋಭಾರಾಣಿ ಅವರು ಮೊದಲ ಬಾರಿಗೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದರ್ಶನ್ ಕೈಯಲ್ಲಿ ಕೋಳ ಇರಲಿಲ್ಲ. ಆರೋಪಿ ದರ್ಶನ್ ಕೈ ನೋವಾಗಿದ್ದರಿಂದ ಬಟ್ಟೆ ಕಟ್ಟಿದ್ದರು.
ದರ್ಶನ್ ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆ ಇಲ್ಲ. ವದಂತಿಗಳಿಗೆ ಕಿವಿಕೊಡಬೇಡಿ. ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೇನ್ ಗಳನ್ನ ಬಿಚ್ಚಿಸಲಾಗಿದೆ. ಇನ್ನು ದರ್ಶನ್ ಹಾಕಿಕೊಂಡಿದ್ದ ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜೈಲಿನಲ್ಲಿ ಪವರ್ ಗ್ಲಾಸ್ಗೆ ಅವಕಾಶ ಇದೆ. ಅದೆಷ್ಟು ಪವರ್ ಇದೆ ಎಂದು ಡಾಕ್ಟರ್ ಚೆಕ್ ಮಾಡುತ್ತಿದ್ದಾರೆ. ದರ್ಶನ್ ಇರುವ ಬ್ಯಾರಕ್ನತ್ತ ಹೋಗಿಲ್ಲ. ಎಲ್ಲರಿಗೂ ಕೊಡುವ ಊಟವನ್ನೇ ದರ್ಶನ್ಗೂ ಕೊಡುತ್ತೇವೆ. ಕೈಯಲ್ಲಿದ್ದ ಖಡಗ ಟೈಟ್ ಆಗಿತ್ತು, ಹಾಗಾಗಿ ತೆಗೆಯಲಾಗಿತ್ತು. ವಿಚಾರಣಾಧೀನ ಕೈದಿ ಸಂಖ್ಯೆ ಮಾಧ್ಯಮದಲ್ಲಿ ಹೇಳುವ ವಿಚಾರವಲ್ಲ ಎಂದು ತಿಳಿಸಿದರು.