ಜೈಲಿಗೆ ಹೋಗಿ ಬಂದ ಬಳಿಕ ಸಿನಿಮಾದಲ್ಲಿ ನಟಿಸಲ್ವಾ ದರ್ಶನ್: ಪಡೆದ ಅಡ್ವಾನ್ಸ್​ ಹಣ ವಾಪಸ್ ಕೊಟ್ರಾ ಚಾಲೆಂಜಿಂಗ್ ಸ್ಟಾರ್?

0
Spread the love

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು 7 ತಿಂಗಳ ಕಾಲ ಜೈಲಿನಲ್ಲಿದ್ದ ಹೊರ ಬಂದ ದರ್ಶನ್ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ಇತ್ತ ದರ್ಶನ್ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಮಾತ್ರವಿದ್ದು ಅಭಿಮಾನಿಗಳು ಭರ್ಜರಿಯಾಗಿ ತಯಾರಿ ಮಾಡಿಕೊಳ್ತಿದ್ದಾರೆ. ಹೀಗಿರುವಾಗಲೇ ದರ್ಶನ್ ಫ್ಯಾನ್ಸ್​ಗೆ ಶಾಕಿಂಗ್​ ವಿಚಾರ ಒಂದು ಹೊರಬಿದ್ದಿದೆ.

Advertisement

ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದ ಆರೋಪಿ ನಟ ದರ್ಶನ್‌ ತೂಗುದೀಪ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ನಟ ದರ್ಶನ್​ ಜೈಲಿನಿಂದ ಆಚೆ ಬಂದ ಬೆನ್ನಲ್ಲೇ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಮತ್ತೆ ದರ್ಶನ್ ರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೆ ದೊಡ್ಡ ಶಾಕ್ ಎದುರಾಗಿದೆ.

ದರ್ಶನ್ ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾ ತಂಡ ಕೊಟ್ಟ ಅಡ್ವಾನ್ಸ್ ಹಿಂತಿರುಗಿಸಿದ್ದಾರಂತೆ. ಡೆವಿಲ್ ನಂತರ ಇರೋ ಸಿನಿಮಾಗಳ ಹಣವನ್ನ ದರ್ಶನ್ ವಾಪಸ್ ಮಾಡಿದ್ದಾರೆ ಅನ್ನೋ ಸುದ್ದಿ ಸಖತ್ ಸದ್ದು ಮಾಡುತ್ತಿದೆ.

ಇನ್ನು ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣದ ಸಿನಿಮಾದಲ್ಲಿ ದರ್ಶನ್ ನಟಿಸಬೇಕಿತ್ತು. ಈ ಸಿನಿಮಾದಲ್ಲಿ ನಟಿಸೋದಕ್ಕೆ ದರ್ಶನ್ ಅಡ್ವಾನ್ಸ್ ಕೂಡ ಪಡೆದಿದ್ದರು. ಆದ್ರೆ ಇದೀಗ ಆ ದುಡ್ಡನ್ನ ದರ್ಶನ್ ವಾಪಸ್ ಕೊಟ್ಟಿದ್ದಾರಂತೆ. ಹೀಗಿರುವಾಗ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾ ಕೂಡ ನಿಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಈ ಪ್ರೊಡಕ್ಷನ್​ ಅಡಿ ತಯಾರಾಗಬೇಕಿದ್ದ ದರ್ಶನ್ ಹಾಗೂ ಜೋಗಿ ಪ್ರೇಮ್ ಸಿನಿಮಾಗೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.


Spread the love

LEAVE A REPLY

Please enter your comment!
Please enter your name here