ಬೆಂಗಳೂರು: ನಟ ದರ್ಶನ್ ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ನೋವುಂಟುಮಾಡಿದೆ. ಕಳೆದ ವರ್ಷ ಇದೇ ದಿನ ಕುಟುಂಬದ ಜೊತೆ ಸಂಭ್ರಮಿಸಿದ್ದರೂ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ಈ ನಡುವೆ ನಟಿ ರಕ್ಷಿತಾ ಗೆಳೆಯನನ್ನು ನೆನೆದು ಭಾವುಕ ಸಂದೇಶ ಪ್ರಕಟಿಸಿದ್ದಾರೆ. ದರ್ಶನ್, ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ಒಟ್ಟಿಗೆ ಇರುವ ಹಳೆಯ ಚಿತ್ರವನ್ನು ಹಂಚಿಕೊಂಡು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಇನ್ನೊಂದು ಸಂದೇಶದಲ್ಲಿ ಪ್ರತಿದಿನವೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ, ನೀನು ಮತ್ತೆ ಸಂತೋಷವಾಗಿ ಇರುವ ದಿನ ಬರಲಿ ಎಂದು ಬರೆದು ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ.
ಜಾಮೀನು ವಜಾದ ಹಿನ್ನೆಲೆಯಲ್ಲಿ ದರ್ಶನ್ ಜೈಲಿನಲ್ಲೇ ಉಳಿದಿದ್ದು ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಅಭಿಮಾನಿಗಳು ಬಿಡುಗಡೆಗೆ ಕಾಯುತ್ತಿದ್ದಾರೆ.



