ಡಿಕೆಶಿ ನಿವಾಸಕ್ಕೆ ದರ್ಶನ್ ಸೋದರ ದಿನಕರ್, ಪತ್ನಿ ವಿಜಯಲಕ್ಷ್ಮಿ ಭೇಟಿ!

0
Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್‌ ಜೈಲು ಪಾಲಾಗಿದೆ. ಈ ಸಂಬಂಧ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿಇಂದು ತಮ್ಮ ಮೈದುನ ದಿನಕರ್ ಜೊತೆ ನಗರದ ಸದಾಶಿವನಗರದಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದರು. ಅವರಿಬ್ಬರು ಕಾರಿಂದ ಇಳಿದು ಶಿವಕುಮಾರ್ ಮನೆ ಪ್ರವೇಶಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು.

Advertisement

ದರ್ಶನ್ ನ್ಯಾಯಾಂಗ ಕಸ್ಟಡಿಯನ್ನು ನ್ಯಾಯಾಲಯವು ಆಗಸ್ಟ್ 1 ರವರೆಗೆ ವಿಸ್ತರಿಸಿದೆ. ಅವರೊಂದಿಗೆ ನಗರದ ಕೇಂದ್ರೀಯ ಕಾರಾಗೃಹದಲ್ಲಿರುವ ಇತರ 12 ಆರೋಪಿಗಳ ನ್ಯಾಯಾಗ ಕಸ್ಟಡಿಯನ್ನು ಸಹ ಅದೇ ತಾರೀಖಿನವರೆಗೆ ವಿಸ್ತರಿಸಲಾಗಿದೆ. ವಿಜಯಲಕ್ಷ್ಮಿ ಮತ್ತು ದಿನಕರ್ ಉಪ ಮುಖ್ಯಮಂತ್ರಿಯ ಜೊತೆ ಏನು ಮಾತಾಡಲಿದ್ದಾರೆ ಅನ್ನೋದು ಕುತೂಹಲಕಾರಿ ಸಂಗತಿಯಾಗಿದೆ


Spread the love

LEAVE A REPLY

Please enter your comment!
Please enter your name here