ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿಯ ಆದೇಶ ಇಂದು ಪ್ರಕಟವಾಗಲಿದೆ. ಇದರ ಬೆನ್ನಲ್ಲೇ ನಟ ದರ್ಶನ್ ಭೇಟಿ ಮಾಡಲು ದರ್ಶನ್ ಆಪ್ತ ಧನ್ವೀರ್ ಹಾಗೂ ಆಪ್ತರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ರು. ಜೈಲಿಗೆ ಆಗಮಿಸಿದ ಧನ್ವೀರ್, ಹೇಮಂತ್,
Advertisement
ನಟ ದರ್ಶನ್ ಅವರಿಗಾಗಿ ಮೂರು ಬ್ಯಾಗ್ ಗಳಲ್ಲಿ ಬಟ್ಟೆಗಳು, ಬೇಕರಿ ತಿನಿಸು, ಡ್ರೈ ಫ್ರೂಟ್ಸ್ ತಂದಿದ್ರು. ಧನ್ವೀರ್, ಹಾಗೂ ಹೇಮಂತ್ ಸಂದರ್ಶಕರ ಕೊಠಡಿಗೆ ತೆರಳಿದ್ರು. ಪತಿ ದರ್ಶನ್ ನೋಡಲು ವಿಜಯಲಕ್ಷ್ಮಿ ಪ್ರತಿ ವಾರ ಬಳ್ಳಾರಿ ಜೈಲಿಗೆ ಭೇಟಿ ನೀಡ್ತಿದ್ರು. ಇಂದುಕೂಡ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಬೇಕಿತ್ತು. ಆದ್ರೆ ಕೊನೆ ಕ್ಷಣದಲ್ಲಿ ವಿಜಯಲಕ್ಷ್ಮಿ ಜೈಲು ಭೇಟಿಯನ್ನು ರದ್ದುಗೊಳಿಸಿದ್ದಾರೆ.