ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ನಿನ್ನೆ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಇಂದು ಆರೋಪಿಗಳಿಗೆ ಕೈದಿ ನಂಬರ್ಗಳನ್ನು ನೀಡಲಾಗಿದೆ.
Advertisement
ವಿಚಾರಣಾಧೀನ ಕೈದಿ ನಂಬರ್ಗಳು ಹೀಗಿವೆ:
- ದರ್ಶನ್ – 7314
- ಪವಿತ್ರಾ ಗೌಡ – 7313
- ನಾಗರಾಜ್ – 7315
- ಲಕ್ಷಣ್ – 7316
- ಪ್ರದೂಷ್ – 7317
ದರ್ಶನ್ ಮತ್ತು ಇತರೆ ಆರೋಪಿಗಳು ಮತ್ತೆ ಜೈಲಿಗೆ ಸೇರುವ ಹಿನ್ನೆಲೆಯಲ್ಲಿ, ಕಾರಾಗೃಹ ಇಲಾಖೆಯ ಎಡಿಜಿಪಿ ಬಿ. ದಯಾನಂದ್ ಜೈಲು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಆರೋಪಿಗಳಿಗೆ ವಿಶೇಷ ಸವಲತ್ತು ನೀಡಬಾರದು ಎಂದು ಸೂಚಿಸಿದ್ದಾರೆ.