ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಸದ್ಯ ಡೆವಿಲ್ ಸಿನಿಮಾದ ಶೂಟಿಂಗ್ ಗಾಗಿ ಥಾಯ್ಲೆಂಡ್ ಹಾರಿದ್ದಾರೆ. ಕೊಲೆ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು ಪ್ರಕರಣದ ಜುಲೈ ೨೨ಕ್ಕೆ ವಿಚಾರಣೆ ಮುಂದೂಡಿದೆ. ಈ ಮಧ್ಯೆ ದರ್ಶನ್ ಪುಕೆಟ್ ನಲ್ಲಿ ಭರ್ಜರಿ ಪಾರ್ಟಿ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ಡೆವಿಲ್ ಸಿನಿಮಾದ ಶೂಟಿಂಗ್ ಗಾಗಿ ಚಿತ್ರತಂಡ ಎರಡು ದಿನಗಳ ಹಿಂದಷ್ಟೇ ಥೈಲ್ಯಾಂಡ್ ಗೆ ತೆರಳಿದೆ. ಶೂಟಿಂಗ್ ಗ್ಯಾಪ್ ನಲ್ಲಿ ಚಿತ್ರತಂಡ ಪಾರ್ಟಿ ಎಂಜಾಯ್ ಮಾಡ್ತಿದ್ದು ನಟ ದರ್ಶನ್ ಈ ಪಾರ್ಟಿಯಲ್ಲಿ ಭಾಗಿಯಾಗಿ ಎಂಜಾ ಮಾಡಿದ್ದಾರೆ. ಸದ್ಯ ಪಾರ್ಟಿಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.
ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆಂದು ಚಿತ್ರತಂಡ ವಿದೇಶಕ್ಕೆ ತೆರಳಿದೆ. ಈ ಹಾಡಿದ ಚಿತ್ರೀಕರಣ ಕಂಪ್ಲೀಟ್ ಆದರೆ ಅಲ್ಲಿಗೆ ಇಡೀ ಸಿನಿಮಾದ ಶೂಟಿಂಗ್ ಮುಗಿದಂತೆ ಆಗುತ್ತದಂತೆ. ರೇಣುಕಾಸ್ವಾಮಿ ಕೊಲೆ ಆರೋಪಿಯಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ವಿದೇಶ ಪ್ರಯಾಣ ಮಾಡಿದ್ದು ಸುಮಾರು ಹತ್ತು ದಿನಗಳ ಕಾಲ ಥೈಲ್ಯಾಂಡ್‌ನಲ್ಲಿ ಇರಲಿದ್ದಾರೆ.