ಏಷ್ಯಾಕಪ್‌ನಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಂಬ್ಯಾಕ್ಗೆ ದಿನಾಂಕ ನಿಗದಿಯಾಗಿದೆ.
2025 ರ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಎಡ ಕ್ವಾಡ್ರೈಸ್ಪ್ಸ್ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಫೈನಲ್‌ನಲ್ಲಿ ಆಡಲಾಗಲಿಲ್ಲ. ಗಾಯದಿಂದಾಗಿ ತಂಡದಿಂದ ಹೊರಬಿದ್ದ ನಂತರ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಬಂದಿದ್ದ ಪಾಂಡ್ಯ, ಕಠಿಣ ತರಬೇತಿ ಪಡೆಯುತ್ತಿದ್ದು, ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆ ಪಾಸಾದ ನಂತರ ದೇಶೀಯ ಕ್ರಿಕೆಟ್‌ಗೆ ಮರಳುತ್ತಾರೆ. ಆ ನಂತರ ಟೀಂ ಇಂಡಿಯಾವನ್ನು ಸೇರುತ್ತಾರೆ ಎಂದು ವರದಿಯಾಗಿದೆ. ಇದರರ್ಥ ಅವರು ನವೆಂಬರ್ 26 ರಂದು ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ತಂಡದ ಪರ ಆಡುವುದನ್ನು ಕಾಣಬಹುದಾಗಿದೆ.
ವರದಿಗಳ ಪ್ರಕಾರ, ಪಾಂಡ್ಯ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ, ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಆಡುವುದು ಖಚಿತ. ಅದು ಸಾಧ್ಯವಾಗದಿದ್ದರೆ, ತಂಡದ ಎರಡನೇ ಪಂದ್ಯದಲ್ಲಿ ಪಾಂಡ್ಯ ಆಡುವುದನ್ನು ಕಾಣಬಹುದು.
ನವೆಂಬರ್ 30 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಆಡಬೇಕಾಗಿದೆ. ಅಂತಹ ಸನ್ನಿವೇಶದಲ್ಲಿ, ಪಾಂಡ್ಯ ಭಾರತೀಯ ತಂಡಕ್ಕೆ ಮರಳುವ ಮೊದಲು ಕನಿಷ್ಠ ಒಂದು ದೇಶೀಯ ಪಂದ್ಯವನ್ನು ಆಡಬಹುದು. ಇದರರ್ಥ ಪಾಂಡ್ಯ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿ ದೇಶಿ ಟೂರ್ನಿಯಲ್ಲಿ ಆಡಲು ಅನುಮತಿ ಪಡೆದರೆ, ಹಾರ್ದಿಕ್ ಪಾಂಡ್ಯ ಯಾವುದೇ ವಿರಾಮವಿಲ್ಲದೆ ಮೈದಾನಕ್ಕೆ ಮರಳಬಹುದಾಗಿದೆ.


