3 ವರ್ಷದಿಂದ ನಾನು ಸಿಂಗಲ್ ಆಗೇ ಇದ್ದೀನಿ ಎಂದು ಹೇಳುವ ಮೂಲಕ ಡೇಟಿಂಗ್ ವದಂತಿಗಳನ್ನ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶುಭ್‌ಮನ್ ಗಿಲ್ ತಳ್ಳಿ ಹಾಕಿದ್ದಾರೆ. ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವಣ ಪ್ರೇಮ ಪುರಾಣ ಸುದ್ದಿ ಜಾಲತಾಣದಲ್ಲಿ ಆಗಾಗ್ಗೆ ಸದ್ದು ಮಾಡುತ್ತಿದ್ದು, ಇವರಿಬ್ಬರ ಪ್ರೇಮ ಪುರಾಣಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇಬ್ಬರೂ ಕದ್ದು ಮುಚ್ಚಿ ಡೇಟಿಂಗ್ ಮಾಡುತ್ತಿರುವುದು ಹಲವು ಬಾರಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿತ್ತು.
ಇದೀಗ ಡೇಟಿಂಗ್ ವದಂತಿಗಳ ಬಗ್ಗೆ ಮಾತನಾಡಿದ ಅವರು, ನಾನು ಮೂರು ವರ್ಷಗಳಿಂದ ಸಿಂಗಲ್ ಆಗಿದ್ದೇನೆ. ಇವುಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿ ದಿನ ನನ್ನ ಬಗ್ಗೆ ಹುಟ್ಟಿಕೊಳ್ಳುವ ಡೇಟಿಂಗ್ ವದಂತಿಗಳನ್ನು ಕೇಳಿದಾಗ ನಿಜಕ್ಕೂ ಅದೆಲ್ಲಾ ಹಾಸ್ಯಾಸ್ಪದ ಎಂದೆನಿಸುತ್ತದೆ. ಈ ಉಹಾಪೋಹಗಳು ನನ್ನನ್ನು ಹಲವಾರು ವ್ಯಕ್ತಿಗಳೊಂದಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ನಾನು ಒಮ್ಮೆಯೂ ನೋಡಿರದ ಹಾಗೂ ಭೇಟಿಯಾಗದ ವ್ಯಕ್ತಿಯೊಂದಿಗೆ ಸಂಬಂಧ ಹುಟ್ಟಿಸುತ್ತದೆ ಎಂದು ಹೇಳಿದರು.
ನಾನು ನನ್ನ ವೃತ್ತಿಜೀವನದ ಮೇಲೆ ಮಾತ್ರ ಗಮನಹರಿಸುತ್ತೇನೆ. ಹೀಗಾಗಿ ಇದ್ಯಾವುದಕ್ಕೂ ನಾನು ಸಮಯ ಕೊಡುವುದಿಲ್ಲ. ವರ್ಷಪೂರ್ತಿ ದಿನವೂ ನಾನು ನನ್ನ ಕೆಲಸದಲ್ಲಿಯೇ ತೊಡಗಿರುತ್ತೇನೆ, ಹೀಗಿರುವಾಗ ನಾನು ಒಬ್ಬರೊಂದಿಗೆ ಸಂಬಂಧ ಬೆಳೆಸಲು ಬೇಕಾಗುವ ಸಮಯ ನನ್ನ ಬಳಿಯಿಲ್ಲ ಎಂದರು.