ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶಂಕರಭಾರತಿಮಠದಲ್ಲಿ ಬ್ರಹ್ಮವೃಂದ (ಬ್ರಾಹ್ಮಣ ಸಮಾಜ)ದ ವತಿಯಿಂದ ದತ್ತ ಜಯಂತಿ ಅಂಗವಾಗಿ ದಿ.5ರಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸೋಮವಾರ ವಟು ಪೂಜೆ ಮತ್ತು ಸತ್ಯನಾರಾಯಣ ಪೂಜೆಯೊಂದಿಗೆ ಸಂಪನ್ನವಾಯಿತು.
ಶನಿವಾರ ದತ್ತಾತ್ರೇಯ ತೊಟ್ಟಿಲೊತ್ಸವ, ರವಿವಾರ ವಿಶ್ವಶಾಂತಿಗಾಗಿ ದತ್ತ ಹೋಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ದತ್ತಜಯಂತಿ ನಿಮಿತ್ತ ನಿತ್ಯ ಭಜನೆ, ರುದ್ರಾಭಿಷೇಕ, ವಿಶೇಷ ಅಲಂಕಾರ, ಭಜನೆ, ಗುರುಚರಿತ್ರೆ ಪಾರಾಯಣ, ಮಹಿಳೆಯರಿಂದ ಭಜನಾ ಕಾರ್ಯಕ್ರಮಗಳು ಸಾಂಗವಾಗಿ ನಡೆದವು. ಬಾಲಚಂದ್ರಭಟ್ ಹುಲಮನಿ ಅವರ ಮಾರ್ಗದರ್ಶನದಲ್ಲಿ ಶ್ರೀಕಾಂತ ಪೂಜಾರ ಗುರುಚರಿತ್ರೆ ಪಾರಾಯಣವನ್ನು ಮಾಡಿದರು.
ಸೋಮವಾರ ಕೊನೆಯ ದಿವಸ ಸತ್ಯನಾರಾಯಣ ಪೂಜೆ ಹಾಗೂ ವಟು ಪೂಜೆಗಳನ್ನು ನೆರವೇರಿಸಲಾಯಿತು. ಹಿರಿಯ ವೈದಿಕರಾದ ಅನಂತಭಟ್ ಪೂಜಾರ ವಟು ಪೂಜೆಯನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ಡಾ. ಪ್ರಸನ್ನ ಕುಲಕರ್ಣಿ ದಂಪತಿಗಳು ವಟು ಪೂಜೆಯನ್ನು ನೆರವೇರಿಸಿದರು. ನಂತರ ಮದುಕರಿ ಸೇವೆ, ಮಹಾಪ್ರಸಾದ ಸಾಂಗವಾಗಿ ನೆರವೇರಿತು. ಬಾಲಚಂದ್ರಭಟ್ ಹುಲಮನಿ, ಶ್ರೀಕಾಂತ ಪ್ರಜಾರರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಶಂಕರ ಸೇವಾ ಸಮಿತಿ ಅಧ್ಯಕ್ಷ ವಿ.ಎಲ್. ಪೂಜಾರ, ತಾಲೂಕಾಧ್ಯಕ್ಷ ಕೃಷ್ಣ ಕುಲಕರ್ಣಿ, ಕಾರ್ಯದರ್ಶಿ ಅರವಿಂದ ದೇಶಪಾಂಡೆ, ಶಂಕರ ಬೆಟಗೇರಿ, ಗುರಣ್ಣ ಪಾಟೀಲಕುಲರ್ಣಿ, ಕೆ.ಎಸ್. ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ದೃವ ಬೆಟಗೇರಿ, ಅನಿಲ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ರಮೇಶ ಕುಲಕರ್ಣಿ, ನಾಗರಾಜ ಪ್ರಜಾರ ಹಾಗೂ ಸಮಾಜ ಬಾಂಧವರು, ವಿಪ್ರ ಮಹಿಳೆಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.


