ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ದತ್ತಾತ್ರೇಯ ಮೂರ್ತಿ ಭಗ್ನ ಹಿನ್ನೆಲೆ ಕಿಡಿಗೇಡಿಗಳ ಬಂಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
Advertisement
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಪಾಂಡೆ ನಗರದ ದತ್ತಾತ್ರೇಯ ದೇವಸ್ಥಾನದಲ್ಲಿನ ವಿಗ್ರಹವನ್ನು ಭಗ್ನಗೊಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಘಟನೆ ಖಂಡಿಸಿದರು. ಇತ್ತೀಚೆಗೆ ಹಲವೆಡೆ ಹಿಂದೂಗಳ ನಂಬಿಕೆಗೆ ಧಕ್ಕೆ ತರುವಂತಹ ದುಷ್ಕೃತ್ಯಗಳು ಘಟಿಸುತ್ತಲಿವೆ. ಸರ್ಕಾರದ ಬಿಗಿ ಆಡಳಿತ ಇಲ್ಲದಿರುವುದು ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ದತ್ತಾತ್ರೇಯ ಮೂರ್ತಿಯ ಕೈಗಳನ್ನು ಕತ್ತರಿಸಿ ದುಷ್ಕೃತ್ಯ ಎಸಗಿರುವ ಸಮಾಜಘಾತಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.