ರಾಮನಗರ: ಮನೆ ಬಿಟ್ಟು ಹೋಗುವಂತೆ ಮಗ-ಸೊಸೆ ಸೇರಿ ವೃದ್ದೇ ಹಲ್ಲೆ ಮಾಡಿರುವ ಅಮಾನವೀಯ ಘಟನೆ ರಾಮನಗರದ ಚನ್ನಪಟ್ಟಣ ತಾಲೂಕಿನ ಅಬ್ಬೂರು ದೊಡ್ಡಿ ಗ್ರಾಮದಲ್ಲಿ ನಡೆದಿದೆ. ವೃದ್ಧ ಅತ್ತೆಯನ್ನು ಶಾಂತಮ್ಮ ಎಂದು ಗುರುತಿಸಲಾಗಿದೆ. ಶಾಂತಮ್ಮ ಮೇಲೆ ಸೊಸೆ ಸಂಜನಾ ದೊಣ್ಣೆಯಿಂದ ಹಲ್ಲೆ ಮಾಡಿದ್ದಾಳೆ. ಇದನ್ನು ಮಗ ರವೀಂದ್ರ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾನೆ. ಮನೆ ಬಿಟ್ಟು ಹೋಗುವಂತೆ ವೃದ್ಧೆ ಶಾಂತಮ್ಮ ಮೇಲೆ ಮಗ-ಸೊಸೆ ಹಲ್ಲೆ ಮಾಡಿದ್ದಾರೆ.
ಮತ್ತೆ ತವರುಮನೆಗೆ ಕರೆದುಕೊಂಡು ಹೋಗಿ. ಇಲ್ಲಾಂದ್ರೆ ಸಾಯಿಸಿ ಬಿಡುತ್ತೇವೆ ಎಂದು ಸೋದರಮಾವನಿಗೆ ಬೆದರಿಸಲು ಮಗ ರವೀಂದ್ರ ವಿಡಿಯೋ ಮಾಡಿದ್ದಾನೆ. ಈ ಘಟನೆ ಎರಡು ವಾರಗಳ ಹಿಂದೆ ನಡೆದಿರುವ ಶಂಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, . ಮಗ, ಸೊಸೆಯಿಂದ ವೃದ್ಧೆಗೆ ರಕ್ಷಣೆ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


