Davanagere: ವಿದ್ಯುತ್ ತಗುಲಿ ದಂಪತಿ ದುರ್ಮರಣ!

0
Spread the love

ದಾವಣಗೆರೆ:- ತಾಲೂಕಿನ ಕಾಟೀಹಳ್ಳಿಯಲ್ಲಿ ವಿದ್ಯುತ್ ತಗುಲಿ ದಂಪತಿ ದುರ್ಮರಣ ಹೊಂದಿರುವ ಘಟನೆ ಜರುಗಿದೆ.

Advertisement

ಕಾಟೀಹಳ್ಳಿ ಗ್ರಾಮದ ನಾಗರಾಜ್, ಲತಾ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಜಮೀನಿಗೆ ಕೆಲಸಕ್ಕೆ ಹೋದಾಗ ವಿದ್ಯುತ್ ಗ್ರೌಂಡ್‌ ಆಗಿದ್ದರಿಂದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಧ್ಯಾಹ್ನ 3ಗಂಟೆ ಸುಮಾರಿಗೆ ಘಟನೆ ನಡೆದಿದೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವಘಡದಿಂದ ಅವರು ಅನಾಥರಾಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here