ದಾವಣಗೆರೆ: 10 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ PDO ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ನಡೆದಿದೆ. ಪಲ್ಲಾಗಟ್ಟೆ ಗ್ರಾಮ ಪಂಚಾಯಿತ್ ಪಿಡಿಓ ಶಶಿಧರ ಪಾಟೀಲ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು,
Advertisement
ಸೂರಗೊಂಡನಹಳ್ಳಿ ರೈತ ಅಶೋಕನ ಆಸ್ತಿ ದಾಖಲೆ ಹಾಗೂ ಖಾತೆ ಬದಲಾವಣೆಗೆ ಪಾಟೀಲ್ ಹತ್ತು ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿ ಬಂಧಿಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಕಲಾವತಿ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಗುರು ಬಸವರಾಜ್ ಮತ್ತು ಪ್ರಭು ಸೂರಿನ್ ದಾಳಿ ನಡೆಸಿದ್ದು, ಈಗಾಗಲೇ ಐದು-ಆರು ಪಂಚಾಯಿತಿಗಳಲ್ಲಿ ಗೋಲ್ಮಾಲ್ ಆರೋಪ ಹೊತ್ತಿದ್ದ ಶಶಿಧರ ಪಾಟೀಲ್ ತನಿಖೆ ಎದುರಿಸುತ್ತಿದ್ದಾರೆ.


