ದಾವಣಗೆರೆ:- ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಉಪತಹಸೀಲ್ದಾರ್ ನನ್ನು ಖೆಡ್ಡಾಗೆ ಕೆಡವಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ದೇವರಹಳ್ಳಿ ನಾಡಕಛೇರಿ ಉಪ ತಹಸೀಲ್ದಾರ್ ಸುಧಾ ‘ಲೋಕಾ’ ಬಲೆಗೆ ಬಿದ್ದ ಅಧಿಕಾರಿ ಎನ್ನಲಾಗಿದೆ.
ಬೋನೋ ಫೈಡ್ ಪ್ರಮಾಣ ಪತ್ರ ನೀಡಲು ಸುಧಾ ಎನ್ನುವವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಿರೇಗಂಗೂರು ಗ್ರಾಮದ ಕುಮಾರ್ ಎಂಬ ಯುವಕನಿಗೆ 2000 ಲಂಚ ನೀಡುವಂತೆ ಒತ್ತಾಯಿಸಿದ್ದರು. ಇಂದು ಕಚೇರಿಯಲ್ಲಿ ಮುಂಗಡವಾಗಿ 500 ರೂಪಾಯಿ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಸಾರ್ವಜನಿಕರಿಂದ ನಿತ್ಯ ಲಂಚ ಪಡೆದೇ ಕೆಲಸ ಮಾಡುತ್ತಿದ್ದರೆಂದು ಸುಧಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಾಗಿ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಅಧಿಕಾರಿಗಳು, ಇಂದು ಹಣ ಪಡೆಯುವಾಗ ಉಪತಹಸೀಲ್ದಾರ್ ಸುಧಾ ರನ್ನು ಅರೆಸ್ಟ್ ಮಾಡಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪೂರೆ ನೇತೃತ್ವದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.