ದಾವಣಗೆರೆ:- ನಗರದ ಕುಂದವಾಡ ಕೆರೆಯಲ್ಲಿ ವಾಯುವಿಹಾರಿಗಳ ಬಳಗದವರು ಸ್ವಚ್ಛತಾ ಕಾರ್ಯ ನಡೆಸಿದರು.
Advertisement
ನಗರಕ್ಕೆ ಕುಡಿಯುವ ನೀರು ಪೂರೈಸುವ ಕುಂದವಾಡ ಕೆರೆ, ಕೆರೆ ಸುತ್ತಮುತ್ತ ಸ್ವಚ್ಛವಾಗಿರಬೇಕೆಂದು ಸಂಕಲ್ಪ ಮಾಡಿ ಯೋಗ ಗುರು ಡಾಕ್ಟರ್ ರಘುಪ್ರಸಾದ್ ಅವರ ನೇತೃತ್ವದಲ್ಲಿ ಕುಂದವಾಡ ವಾಯುವಿಹಾರಿಗಳು ಸ್ವಚ್ಛತೆಯ ಶ್ರಮದಾನ ಮಾಡಿದರು.
ನಮ್ಮ ಕೆರೆ ನಮ್ಮ ಜವಾಬ್ದಾರಿ:-
ಕೆರೆಯ ವಾತಾವರಣ ಸ್ವಚ್ಛತೆಯಿಂದ ಕೂಡಿದ್ದಾಗ ಮಾತ್ರ ಪ್ರಶಾಂತತೆಯ ವಾತಾವರಣ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಾಯುವಿಹಾರಿಗಳು ಹೇಳಿದ್ದಾರೆ.
ವಾಯುವಿಹಾರಿಗಳೇ ಇಂದು ಕೆರೆಯಲ್ಲಿ ಬಿದಿದ್ದ ಪ್ಲಾಸ್ಟಿಕ್, ಕಸ, ಕಡ್ಡಿ ತೆಗೆದು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳು ಹಿತ ಗಮನ ಹರಿಸಬೇಕೆಂದು ವಾಯುವಿಹಾರಿಗಳು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕುಂದವಾಡ ವಾಯುವಿಹಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.