ದಾವಣಗೆರೆ:- ಜಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಬಾಂಬ್ ಸಿಡಿದಂತೆ ಶಬ್ಧ ಕೇಳಿ ಗ್ರಾಮಸ್ಥರಲ್ಲಿ ಆತಂಕ ಮೂಡಿತು.
ಚಿಕ್ಕಮಲ್ಲನಹೊಳೆ, ಕೋಲಮ್ಮನಹಳ್ಳಿ, ಕಲ್ಲಹಳ್ಳಿ ಪ್ರದೇಶಗಳಲ್ಲಿ ಕೆಲ ಮನೆಗಳ ಪಾತ್ರೆಗಳು ನೆಲಕ್ಕೆ ಬಿದ್ದಿದ್ದವು. ಯಾವ ಕಾರಣಕ್ಕೆ ಈ ವಿಚಿತ್ರ ಶಬ್ಧ ಬಂದಿದೆ ಎನ್ನುವುದು ಕೂಡ ಯಕ್ಷಪ್ರಶ್ನೆಯಾಗಿದೆ. ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಗಳೂರು ತಹಶಿಲ್ದಾರ್ ಸಯ್ಯದ್ ಕಲೀಂವುಲ್ಲಾ ಈ ಬಗ್ಗೆ ಮಾತನಾಡಿ, ಯಾವುದೇ ಸ್ಫೋಟ ಸಂಭವಿಸಿಲ್ಲ, ಜನರು ಭಯಪಡಬೇಕಿಲ್ಲ. ವಿಜಯನಗರ ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಕಡೆಯಿಂದ ಸ್ಫೋಟದ ಅನುಭವ ಆಗಿದೆ ಎಂಬ ಮಾಹಿತಿ ಇದೆ. ಸ್ಥಳಕ್ಕೆ ಗ್ರಾಮಲೆಕ್ಕಿಗರನ್ನು ಕಳಿಸಿ ಮಾಹಿತಿ ಸಂಗ್ರಹಿಸಿದ್ದೇನೆ. ಜಗಳೂರು ತಾಲೂಕಿನ ಜನರು ಭಯಪಡುವ ಅಗತ್ಯವಿಲ್ಲ ಎಂದರು.



