ದಾವಣಗೆರೆ:- ದಾವಣಗೆರೆ ಹೊರ ವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ರಾಟ್ ವೀಲರ್ ನಾಯಿ ದಾಳಿಗೆ ಮಹಿಳೆ ಬಲಿಯಾದ ಘಟನೆ ಜರುಗಿದೆ.
ಅನಿತಾ (38) ನಾಯಿ ದಾಳಿಯಿಂದ ಸಾವನ್ನಪಿದ ಮಹಿಳೆ. ಕಳೆದ ರಾತ್ರಿ ಕಾರಿನಲ್ಲಿ ಬಂದ ಅಪರಿಚಿತರು 2 ರಾಟ್ ವೀಲರ್ ಜಾತಿಯ ನಾಯಿಗಳನ್ನು ಹೊನ್ನೂರು ಗೊಲ್ಲರಹಟ್ಟಿಯ ಬಳಿ ಬಿಟ್ಟು ಹೋಗಿದ್ದಾರೆ. ಅದೇ ಸಮಯದಲ್ಲಿ ಮನೆಯಿಂದ ಹೊರ ಬಂದ ಮಹಿಳೆ ಮೇಲೆ ಶ್ವಾನಗಳು ದಾಳಿ ನಡೆಸಿವೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಶಿರಾ ತಾಲೂಕು ಅಸ್ಪತ್ರೆಯ ಶವಗಾರದಲ್ಲಿ ಮಹಿಳೆಯ ಮೃತದೇಹವನ್ನು ಶವಪರೀಕ್ಷೆ ನಡೆಸಲಾಗಿದೆ.



