ಹೊಸಪೇಟೆ ತಾಲೂಕು ಕಚೇರಿಗೆ DC ಭೇಟಿ: ಅಧಿಕಾರಿಗಳಿಗೆ ಚಳಿ ಬಿಡಿಸಿದ ಎಂ.ಎಸ್ ದಿವಾಕರ್!

0
Spread the love

ವಿಜಯನಗರ: ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಲಂಚ ತಗೊಳ್ತಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಹೊಸಪೇಟೆ ತಾಲೂಕು ಕಚೇರಿಗೆ ಡಿಸಿ ಎಂ.ಎಸ್ ದಿವಾಕರ್ ಭೇಟಿ ನೀಡಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ಘಟನೆ ನಡೆದಿದೆ.

Advertisement

ಜಿಲ್ಲಾಧಿಕಾರಿ ತಾಲೂಕು‌ ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಕಚೇರಿ ಸಿಬ್ಬಂಧಿಗಳು ಫುಲ್ ಅಲರ್ಟ್ ಆದರು. ಗ್ರಾಮೀಣ ಭಾಗಗಗಳಿಂದ ಬರುವ ವಯೋವೃದ್ದರು ಸಾರ್ವಜನಿಕರಿಂದ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಬಗೆ ಹರಿಸಿದರು. ಕಚೇರಿಗೆ ಅಲೆದಾಡಬೇಕಾಗಿಲ್ಲ ಅನಲೈನ್ ನಲ್ಲಿ ಅರ್ಜಿ ಸಲ್ಲಿಸಿ ಎಂದು ವೃದ್ದೆಗೆ ಕಿವಿಮಾತು ಹೇಳಿದರು.

ತಾಲೂಕು ಕಚೇರಿಯಲ್ಲಿ ಕಡತಗಳ ವಿಲೇವಾರಿಗೂ ಲಂಚ ತಗೊತಾರೆ ಎಂಬ ಆರೋಪ ಇತ್ತು. ಆದ್ದರಿಂದ ತಾಲೂಕು ಕಚೇರಿಯ ವಿವಿಧ ವಿಭಾಗಗಳ ಕಚೇರಿಗೆ ತೆರಳಿ ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ ಮಾಡಿದ್ದಾರೆ.

ವೃಧ್ಯಾಪ್ಯ ವೇತನ, ವಿಧವಾ, ಸೇರಿದಂತೆ ವಿವಿಧ ಅರ್ಜಿಗಳು ತುರ್ತು ವಿಲೇವಾರಿಗೆ ಅಧಿಕಾರಿಗಳಿಗೆ ಡಿ.ಸಿ ಸೂಚನೆ ನೀಡಿದ್ದು, ತಾಲೂಕು ಕಚೇರಿಯ ಸ್ವಚ್ಚತೆ ಸೇರಿದಂತೆ ಸಾರ್ವಜನಿಕರಿಗೆ ಕುಡಿಯುವ ನೀರಿನ‌ ಸಮಸ್ಯೆ ಬಗೆ ಹರಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here