HomeSports NewsDC Vs SRH IPL 2025: ಡೆಲ್ಲಿಗೆ ಹ್ಯಾಟ್ರಿಕ್ ಗೆಲುವು: ಮಂಕಾದ ಸನ್ ರೈಸರ್ಸ್ ಗೆ...

DC Vs SRH IPL 2025: ಡೆಲ್ಲಿಗೆ ಹ್ಯಾಟ್ರಿಕ್ ಗೆಲುವು: ಮಂಕಾದ ಸನ್ ರೈಸರ್ಸ್ ಗೆ 2ನೇ ಆಘಾತ!

For Dai;y Updates Join Our whatsapp Group

Spread the love

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್‌ 2025ರ ಆವೃತ್ತಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಇಂದು ನಡೆದ IPL ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮಣಿಸುವಲ್ಲಿ ಯಶಸ್ವಿಯಾಗಿದೆ.

ವಿಶಾಖಪಟ್ಟಣದ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಸನ್ ರೈಸರ್ಸ್ ತಂಡ ಕೇವಲ 18.4 ಓವರ್ ಗಳಲ್ಲಿ 163 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ದಿಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ 24 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿತು. ಸನ್ ರೈಸರ್ಸ್ ತಂಡದ ಪರವಾಗಿ ಹಿರಿಯ ಆಟಗಾರ ಫಾಫ್ ಡು ಪ್ಲೆಸಿಸ್ ಅವರು 27 ಎಸೆತಗಳಿಂದ ತಲಾ 3 ಬೌಂಡರಿ ಸಿಕ್ಸರ್ ಗಳಂತೆ 50 ರನ್ ಗಳಿಸಿದರು. ಉಳಿದಂತೆ ಜೇಕ್ ಫ್ರೇಸರ್ ಮೆಕ್ ಗುರ್ಕ್ 38, ಅಭಿಷೇಕ್ ಪೋರೆಲ್ ಔಟಾಗದೆ 34, ತ್ರಿಸ್ಟನ್ ಸ್ಟಬ್ಸ್ ಔಟಾಗದೆ 21 ರನ್ ಗಳಿಸಿದರು. ಹೈದರಾಬಾದ್ ಪರ ಜೀಶನ್ ಅನ್ಸಾರಿ 42 ರನ್ ಗೆ 3 ವಿಕೆಟ್ ಗಳಿಸಿದರು.

ಕೊನೆಗೂ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ತಂಡವು ಕಳೆದ ಸೀಸನ್​ನ ಫೈನಲಿಸ್ಟ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ದೆಹಲಿಯ ಈ ಗೆಲುವಿನ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಪ್ರಮುಖ ಪಾತ್ರವಹಿಸಿದರು. ಅವರು ಪ್ರಮುಖ 5 ವಿಕೆಟ್‌ಗಳನ್ನು ಪಡೆದು ಸನ್‌ರೈಸರ್ಸ್‌ನ ಸ್ಫೋಟಕ ಬ್ಯಾಟಿಂಗ್ ಅನ್ನು ನಾಶಪಡಿಸಿದರು.

ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಐಪಿಎಲ್ 2025 ರಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಇನ್ನೂ ಸನ್‌ರೈಸರ್ಸ್‌ಗೆ ಇದು ಸತತ ಎರಡನೇ ಸೋಲು. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಸೋಲನ್ನು ಎದುರಿಸಬೇಕಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!