ಬೇಜವಾಬ್ದಾರಿಯ ಸಿಬ್ಬಂದಿಗಳಿಗೆ ಡಿಸಿ ಎಚ್ಚರಿಕೆ

0
notice
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಬುಧವಾರ ಶಿರಹಟ್ಟಿಯ ಶ್ರೀ ಎಸ್‌ಜೆಎಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚುನಾವಣಾ ಸಿಬ್ಬಂದಿಗೆ ಆಯೋಜಿಸಿದ್ದ ಪ್ರಥಮ ಹಂತದ ತರಬೇತಿಗೆ ಸಮಯಕ್ಕೆ ಸರಿಯಾಗಿ ಬಾರದೇ, ತಡವಾಗಿ ಬಂದ 112 ಸಿಬ್ಬಂದಿಗೆ ಮತ್ತು ತರಬೇತಿಗೆ ಗೈರು ಉಳಿದ 14 ಜನ ಸಿಬ್ಬಂದಿ ಸೇರಿದಂತೆ ಒಟ್ಟು 126 ಸಿಬ್ಬಂದಿಗೆ ಶಿರಹಟ್ಟಿಯ ಸಹಾಯಕ ಚುನಾವಣಾಧಿಕಾರಿ ಅಮಿತ ಬಿದರಿ ನೊಟೀಸ್ ಜಾರಿ ಮಾಡಿದ್ದಾರೆ.

Advertisement

ಶಿರಹಟ್ಟಿಯಲ್ಲಿಯ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಭೇಟಿ ನೀಡಿ ತರಬೇತಿಗೆ ಸಿದ್ದಪಡಿಸಿದ್ದ 14 ಕೊಠಡಿಗಳ ವೀಕ್ಷಣೆ ನಡೆಸುವ ಸಂದರ್ಭದಲ್ಲಿ ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ ನಡೆಸಿದರು. ಒಟ್ಟು 559 ಹಾಜರಾತಿ ಇರುವುದನ್ನು ಗಮನಿಸಿ, ತಡವಾಗಿ ಆಗಮಿಸುತ್ತಿರುವ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಅವರೆಲ್ಲರಿಗೂ ನೊಟೀಸ್ ಜಾರಿ ಮಾಡುವಂತೆ ಸಹಾಯಕ ಚುನಾವಣಾಧಿಕಾರಿಗೆ ನಿರ್ದೆಶನ ನೀಡಿ ತೆರಳಿದರು. ತದನಂತರ ಸಹಾಯಕ ಚುನಾವಣಾಧಿಕಾರಿ ಸಿಬ್ಬಂದಿಗಳಿಗೆ ಸ್ಥಳದಲ್ಲಿಯೇ ನೋಟಿಸ್ ನೀಡಿದ್ದಾರೆ.

ತಹಸೀಲ್ದಾರ ಅನಿಲ ಬಡಿಗೇರ ಮಾತನಾಡಿ, ತರಬೇತಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಎಲ್ಲ ಎಆರ್‌ಓ ಮತ್ತು ಪಿಆರ್‌ಓಗಳಿಗೆ ತಿಳಿಸಲಾಗಿತ್ತು. ಆದಾಗ್ಯೂ ಸಮಯಕ್ಕೆ ಸರಿಯಾಗಿ ಬಾರದೇ ಇದ್ದುದರಿಂದ ಹಾಗೂ ಜಿಲ್ಲಾಧಿಕಾರಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ತಡವಾಗಿ ಬರುತ್ತಿರುವ ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅವರೆಲ್ಲರಿಗೂ ನೊಟೀಸ್ ನೀಡುವಂತೆ ತಿಳಿಸಿದ್ದಾರೆ. ತರಬೇತಿಗೆ ಹಾಜರಾಗುವ ಸಿಬ್ಬಂದಿಗಳಿಗೆ ಸಮರ್ಪಕ ಊಟ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು ಎಂದರು.


Spread the love

LEAVE A REPLY

Please enter your comment!
Please enter your name here