ಗದುಗಿನಲ್ಲಿ ಡಿ.ಸಿ.ಸಿ ಬ್ಯಾಂಕ್ ಸ್ಥಾಪನೆಯಾಗಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಸಂಘವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಗದಗ ಜಿಲ್ಲೆಗೆ ಸಲ್ಲುತ್ತದೆ. ಅದರಲ್ಲೂ ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮ ಬಾರಿಗೆ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸ್ಥಾಪನೆ ಮಾಡಿ ಇತಿಹಾಸ ನಿರ್ಮಿಸಲಾಗಿದೆ. ಇಂತಹ ಐತಿಹಾಸಿಕ ಜಿಲ್ಲೆಯಲ್ಲಿ ಡಿ.ಸಿ.ಸಿ ಬ್ಯಾಂಕ್ ಸ್ಥಾಪನೆಯಾಗಬೇಕು ಎನ್ನುವುದು ರೈತರ ಆಸೆಯಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಗದಗಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಮನವಿ ಸಲ್ಲಿಸಿ, ಸುಮಾರು 27 ವರ್ಷಗಳಿಂದ ಡಿ.ಸಿ.ಸಿ ಬ್ಯಾಂಕ್‌ನಿಂದ ಗದಗ ಜಿಲ್ಲೆ ವಂಚಿತವಾಗಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು ಗದಗ ಜಿಲ್ಲೆಗೆ ನೂತನವಾಗಿ ಡಿ.ಸಿ.ಸಿ ಬ್ಯಾಂಕನ್ನು ಮಂಜೂರು ಮಾಡಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ನಿಂಗನಗೌಡ ಮಾಲಿಪಾಟೀಲ, ಮುತ್ತಣ್ಣ ಚೌಡಣ್ಣನವರ, ತೌಸಿಫ್ ಡಾಲಾಯತ್, ವಿನಾಯಕ ಬದಿ, ಸಿರಾಜ್ ಹೊಸಮನಿ, ದಾವಲ್ ತಹಸೀಲ್ದಾರ್, ರಾಹುಲ್ ತೇರದಾಳ, ಮಂಜುನಾಥ ಮಾಳಾವಿ, ಕುಮಾರ ರೇವಣ್ನವರ, ನಬೀಸಾಬ್ ಕಿಲ್ಲೆದಾರ್, ಶಿವಕುಮಾರ ಮಠದ, ವಿಜಯ ಬಡಿಗೇರ, ಮೆಹಬೂಬಲಿ ಡಾಲಾಯತ್ ಸೇರಿದಂತೆ ಕರವೇ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here