ರಾಮನಗರ: ಡಿಸಿಎಂ ಏನಿದ್ರೂ ವಿಧಾನಸೌಧದಲ್ಲಿ, ನೀವೆಲ್ಲ ನಮ್ಮ ಮನೆಯ ಮಕ್ಕಳು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕನಕಪುರದಲ್ಲಿ ಮಾತನಾಡಿದ ಅವರು, ನಾನು ಇಲ್ಲಿಗೆ ಡಿಸಿಎಂ ಆಗಿ ಬಂದಿಲ್ಲ, ಶಾಸಕನಾಗಿ ಬಂದಿದ್ದೇನೆ. ಡಿಸಿಎಂ ಏನಿದ್ರೂ ವಿಧಾನಸೌಧದಲ್ಲಿ, ನೀವೆಲ್ಲ ನಮ್ಮ ಮನೆಯ ಮಕ್ಕಳು ಎಂದಿದ್ದಾರೆ. ಪ್ರತಿ ಶನಿವಾರ ರಜೆ ಇದ್ದಾಗ ಕನಕಪುರಕ್ಕೆ ಕಾರ್ಯಕ್ರಮ ರೂಪಿಸಿದ್ದೆ.
ಅದೇ ಥರ ಕನಕಪುರಕ್ಕೆ ಬಂದಿದ್ದೇನೆ. ತಮಗೆ ಕಾಲೇಜು ಎಲ್ಲಿತ್ತು ಅಂತ ತಮಗೆ ಗೊತ್ತಿಲ್ಲ. ನಿಮ್ಮ ಕಾಲೇಜು ನಗರಸಭೆ ಜಾಗದಲ್ಲಿತ್ತು. ಇದನ್ನು ನಾವಿಲ್ಲಿ ಹೊಸ ಕಾಲೇಜು ಕಟ್ಟಿ. ನಾನು ಕನಕಪುರದ ಚಿತ್ರ ತಯಾರು ಮಾಡಿದ್ದೇನೆ. ನಾನು ಎಂಎಲ್ಎ ಆಗುವುದಕ್ಕಿಂತ ಮುಂಚೆ ಕನಕಪುರ ಹೇಗಿತ್ತು. ಈಗ ಹೇಗಿದೆ ಅಂತ ಚಿತ್ರ ಮಾಡಿಸಿದ್ದೇನೆ. ರಸ್ತೆ, ಕಟ್ಟಡಗಳು ಹೇಗಿತ್ತು, ಈಗ ಹೇಗಿದೆ ಅನ್ನೋದನ್ನು ತೋರಿಸುತ್ತೇನೆ ಎಂದಿದ್ದಾರೆ.



