ಬೆಂಗಳೂರು: ಸಾಹಿತಿ, ಕನ್ನಡ ಅಕ್ಷರ ಲೋಕಕ್ಕೆ ಸರಸ್ವತಿ ಸಮ್ಮಾನ ತಂದುಕೊಟ್ಟ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ನಿನ್ನೆ ವಿಧಿವಶರಾಗಿದ್ದಾರೆ. 94 ವರ್ಷ ತುಂಬು ಜೀವನ ನಡೆಸಿದ ಮೇರು ಸಾಹಿತಿ ಭೈರಪ್ಪ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.
Advertisement
ಅದರಂತೆ ಡಿಸಿಎಂ ಡಿ ಕೆ ಶಿವಕುಮಾರ್ ಕೂಡ ಅಂತಿಮ ದರ್ಶನ ಪಡೆದಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಕ್ಕೆ ಶಾಂತಿ ಸಿಗಲಿ ಅಂತ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದ್ದೇನೆ. ಅವ್ರು ಕನಕಪುರ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ರು. ಆಗ ನನಗೆ ಭೈರಪ್ಪ ಪರಿಚಯವಾಗಿದ್ದು, ಬರವಣಿಗೆಯಲ್ಲಿ ರಾಜಿ ಆಗ್ತಾ ಇರಲಿಲ್ಲ. ಅವ್ರ ಕಾದಂಬರಿಗೆ ಹೊರ ದೇಶದಲ್ಲೂ ಬೇಡಿಕೆ ಇದೆ ಅನ್ನೋದು ನಮಗೆ ಹೆಮ್ಮೆ ಎಂದು ಡಿಸಿಎಂ ಹೇಳಿದ್ದಾರೆ.


