ಬೆಂಗಳೂರಿನಲ್ಲಿ 1.5 ಕಿ.ಲೋ ಮೀಟರ್ ಉದ್ದದ ಮತ್ತೊಂದು ಟನಲ್‌ ರೋಡ್‌ ಘೋಷಿಸಿದ DCM ಡಿಕೆಶಿ!

0
Spread the love

ಬೆಂಗಳೂರು:- ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1.5 ಕಿ.ಲೋ ಮೀಟರ್ ಉದ್ದದ ಮತ್ತೊಂದು ಟನಲ್‌ ರೋಡ್‌ ಘೋಷಿಸಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದವರೆಗೆ 1.5 ಕಿ.ಲೋ ಮೀಟರ್ ಉದ್ದದ ಹೊಸ ಟನಲ್ ರಸ್ತೆ ನಿರ್ಮಾಣವಾಗಲಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಯೋಜನೆಗೆ ಅನುಮತಿ ಪಡೆದು, 2 ವರ್ಷದಲ್ಲಿ ಕಾಮಗಾರಿ ಮುಗಿಸುತ್ತೇವೆ. ವಿಶೇಷ ಹೊಸ ತಂತ್ರಜ್ಞಾನದ ಮೂಲಕ ಈ ಸುರಂಗ ಮಾರ್ಗ ನಿರ್ಮಿಸಲಾಗುವುದು ಎಂದಿದ್ದಾರೆ.

ಇನ್ನೂ ಈ ಮೊದಲು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಸುರಂಗ ಮಾರ್ಗ ಘೋಷಣೆಯಾಗಿತ್ತು. 16.75 ಕಿಲೋಮೀಟರ್ ಉದ್ದದ ಸುರಂಗ ರಸ್ತೆಯನ್ನು ನಿರ್ಮಿಸಲು ದೇಶದ ಹತ್ತು ಪ್ರಮುಖ ಕಂಪನಿಗಳು ಆಸಕ್ತಿಯನ್ನು ತೋರಿಸಿವೆ.


Spread the love

LEAVE A REPLY

Please enter your comment!
Please enter your name here