DCM ಡಿಕೆ ಶಿವಕುಮಾರ್ ಸಿಎಂ ಆಗೋದು ಗ್ಯಾರಂಟಿ, ತಪ್ಪಿಸಲು ಆಗಲ್ಲ: ಹೆಚ್.ವಿಶ್ವನಾಥ್!

0
Spread the love

ಬೆಂಗಳೂರು:- ಕರ್ನಾಟಕದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲಲು DCM ಡಿ.ಕೆ.ಶಿವಕುಮಾರ್ ಅವರ ಕೊಡುಗೆ ಅಪಾರವಿದೆ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ಸಿಎಂ ಬದಲಾವಣೆ ವಿಚಾರ ಇದು ಸಿದ್ದರಾಮಯ್ಯ ಹಬ್ಬಿಸುತ್ತಿರುವ ಗೋಜಲು. ಅವರೇ ಕಾಂಗ್ರೆಸ್ ಪಕ್ಷದ ನೇಮ್ ಅಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಇವರೇನು ಕಾಂಗ್ರೆಸ್ ಕಟ್ಟಿದವರಲ್ಲವಲ್ಲ, ಅವರಿಗೇನು ಆಗಬೇಕು. ಅವರದ್ದು ಮುಗಿಯಿತಲ್ಲ. ಇದು ಅನಾವಶ್ಯಕ. ಮಂತ್ರಿಗಳನ್ನು ಯಾರು ಕೇಳ್ತಾರೆ? ಸುಮ್ನೆ ಇವರುಗಳೇ ಐದು ವರ್ಷ ಅವರೇ ಎನ್ನುತ್ತಾರೆ. 136 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಕೊಡುಗೆ ಇದೆ. ಎಲ್ಲಾದಕ್ಕೂ ಡಿಕೆಶಿಯವರದ್ದು ಖರ್ಚಾಗಿಲ್ವಾ? ಎಲೆಕ್ಷನ್ ಸಂದರ್ಭದಲ್ಲೇ ಆಗಿರುವ ಮಾತುಕತೆ ಇದು. ಡಿ.ಕೆ.ಶಿವಕುಮಾರ್ ಸಿಎಂ ಆಗೋದನ್ನು ಯಾರೂ ತಪ್ಪಿಸಲು ಆಗಲ್ಲ ಎಂದರು.

ಇನ್ನೂ ಸಿಎಂ ಮುಡಾ ಕೇಸ್‌ನಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ. ಮೈಸೂರು ಜನ ಮನೆ ಕಟ್ಟಲು ಒಂದು ಸೈಟ್ ಕೊಡಪ್ಪ ಅಂದರೆ ಅವರ ಮನೆಯವರೆ ಬರೆಸಿಕೊಳ್ಳೋದಾ? ಸಿದ್ದರಾಮಯ್ಯ ಕಾಲದಲ್ಲಿ ಮೈಸೂರು ವಿಜಯನಗರ ಸಾಮ್ರಾಜ್ಯ ಆಗಿದೆ. 1,200 ರೂ.ಗೆ 50*80 ಒಂದು ಸೈಟು ಯಾರ ಕಾಲದಲ್ಲಿ ಇತ್ತು? ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನಬೆಳ್ಳಿ ಮಾರಿದಂತೆ ಸೈಟು ಮಾರಿದ್ದಾರೆ. ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.


Spread the love

LEAVE A REPLY

Please enter your comment!
Please enter your name here