ಡಿಸಿಎಂ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ ಎಂದು ನಟಿ ರಮ್ಯಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ. ಆದರೆ ಅವರು ಹಾಗೇ ಮಾತನಾಡಬಾರದಿತ್ತು.
ಬೆದರಿಸುವ ಉದ್ದೇಶ ಇಲ್ಲ ಅಂತ ಅವರೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರು ಹೇಳಿದ ಹೇಳಿಕೆ ತಪ್ಪು. ಆದರೆ ಅವರ ಅವರು ಹೇಳಿದ ರೀತಿ ಕೆಲವರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಡಿಕೆಶಿ ಅವರು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಈ ವಿಚಾರವನ್ನು ನಾವು ಇಲ್ಲಿಗೆ ಬಿಡೋದು ಒಳ್ಳೆಯದು ಎಂದಿದ್ದಾರೆ.
ಫಿಲ್ಮ್ ಫೆಸ್ಟಿವಲ್‌ಗೆ ಒಂದು ವಾರದ ಹಿಂದೆಯೇ ನನಗೆ ಆಹ್ವಾನ ಬಂದಿದೆ. ಬೇರೆಯವರಿಗೆ ಆಹ್ವಾನ ಹೋಗಿದ್ಯೋ ಇಲ್ವೋ ನನಗೆ ಗೊತ್ತಿಲ್ಲ. ನನಗೆ ಆಹ್ವಾನ ಬಂದಿದೆ, ಹಾಗಾಗಿ ನಾನು ಈಗ ಫಿಲ್ಮ್ ಫೆಸ್ಟಿವಲ್‌ಗೆ ಹೋಗ್ತಿದ್ದೀನಿ. ಈ ವೇಳೆ, ನಾಡು, ನುಡಿ, ಜಲದ ವಿಚಾರದಲ್ಲಿ ಯಾವುದೇ ಆಹ್ವಾನ ಬೇಕಿಲ್ಲ. ಎಲ್ಲರೂ ಅವರಾಗಿಯೇ ಬರಬೇಕು ಎಂದರು.