ಚಾಮರಾಜನಗರದ:- ಇಲ್ಲಿನ ಐತಿಹಾಸಿಕ ಮಲೈ ಮಹದೇಶ್ವರ ಬೆಟ್ಟದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು, ಈಗಾಗಲೇ ಮಹದೇಶ್ವರ ಸನ್ನಿಧಿಗೆ ತಲುಪಿದ್ದು, ಪೂಜೆಯಲ್ಲಿ ಮುಂಜಾನೆಯೇ ಭಾಗಿಯಾಗಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ಪೂಜೆ ನೆರವೇರಿಸಿದ ಡಿಕೆಶಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಅಲ್ಲದೇ ಹುಲಿವಾಹನ ಮಹದೇಶ್ವರ ಬೆಳ್ಳಿರಥ ಪ್ರದಕ್ಷಿಣೆಯಲ್ಲಿ ದಂಡುಕೋಲು ಸೇವೆ ಸಲ್ಲಿಸಿದರು. ಬಹಳಷ್ಟು ಸಚಿವರು ಬುಧವಾರ ರಾತ್ರಿಯೇ ಮಹದೇಶ್ವರ ಬೆಟ್ಟ ತಲುಪಿದ್ದಾರೆ.
ಇಂದು ಮದ್ಯಾಹ್ನ 12 ಗಂಟೆಗೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಮೈಸೂರು ಭಾಗದ ಅಭಿವೃದ್ಧಿ ಯೋಜನೆಗಳು ಮಾತ್ರವಲ್ಲದೆ ಬರೋಬ್ಬರಿ 73 ವಿಷಯಗಳನ್ನು ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಸೇರಿವೆ.
ಬಹುನಿರೀಕ್ಷಿತ ಸಚಿವ ಸಂಪುಟ ಸಭೆಯಲ್ಲಿ ಚಾಮರಾಜನಗರ, ಮಂಡ್ಯ, ಮೈಸೂರು ಭಾಗದ ಹಲವು ಅಭಿವೃದ್ಧಿ ಯೋಜನಾ ಪ್ರಸ್ತಾವನೆಗಳು ಚರ್ಚೆಗೆ ಬರಲಿವೆ ಎನ್ನಲಾಗಿದೆ.