ಗದಗ:- ಡಿಸಿಎಂ ಡಿಕೆಶಿಯ ಸಿಬಿಐ ತನಿಖೆ ಪ್ರಕರಣ ಹಿಂಪಡೆದ ವಿಚಾರವಾಗಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಗದಗ್ ನಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಸೇಫ್ ಅಂತ ಯಾಕೆ ಹೇಳ್ತೀರಾ..? ಕಾನೂನಿನಲ್ಲಿ ಮಾಡಬಾರದು ಅಂತ ರೂಲ್ಸ್ ಏನಾದ್ರು ಇದೆನಾ !?ರೂಲ್ಸ್ ಇಲ್ಲ ಅಂದ್ರೆ ಯಾಕೇ ನೀವು ಸೇಫ್ ಅಂತೀರಾ. ವಿರೋಧ ಪಕ್ಷದವರಿಗೆ ಅದನ್ನು ಬಿಟ್ಟು ಬೇರೆ ಕೆಲಸ ಇಲ್ಲ ಕಾನೂನು ಸಚಿವರು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅವಶ್ಯಕತೆ ಇಲ್ಲಾ ಎಂದರು.
ಇದೇ ವೇಳೆ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿ, ನಾನಂತೂ ನೋಡಿಲ್ಲ. ಯಾರು ಕೊಡಬಾರದು ಅಂತ ಹೇಳಿಲ್ಲ. ಇನ್ನೂ ಹೊರಗಡೆ ಬಂದಿಲ್ಲ. ಅದು ಬಂದ ಮೇಲೆ ಒಳ್ಳೆಯ ರೀತಿ ಚರ್ಚೆ ಆಗಬಹುದು. ವಿರೋಧಿಸುವವರ ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು, ಕಾಂಗ್ರೆಸ್ ಪಕ್ಷದ ನಿರ್ಧಾರ ಜಾತಿ ಗಣತಿ ಆಗಬೇಕು. ನ್ಯಾಯಬದ್ಧವಾಗಿ ಆಗಲಿ. ಜಾತಿ ಗಣತಿ ಆಗಬೇಕು ಅನ್ನೋದು ನಮ್ಮದು ಮತ್ತು ರಾಹುಲ್ ಗಾಂಧಿಯವರೂ ಕೂಡಾ ಹೇಳಿದ್ದಾರೆ ಎಂದರು.