ಬೆಂಗಳೂರು: ಡಿಸಿಎಂಗೆ ಇರೋ ಅಧಿಕಾರ, ನನ್ನ ಬಳಿ ಇದ್ರೆ ಕೇವಲ ಒಂದೇ ವರ್ಷದಲ್ಲಿ ಸರಿ ಮಾಡುತ್ತೇನೆ ಎಂದು ಡಿಕೆಶಿಗೆ ಸಂಸದ ತೇಜಸ್ವಿ ಸೂರ್ಯ ಸವಾಲ್ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ವಿಸ್ತರಣೆ ಆದ್ರೆ ಸಾರಿಗೆ ಸಂಚಾರ ಸುಲಭವಾಗಲಿದೆ. 45 ಸಾವಿರ ಕೋಟಿಯ ಸುರಂಗ ರಸ್ತೆ ಯೋಜನೆ ಅಗತ್ಯ ಬೆಂಗಳೂರಿಗೆ ಇಲ್ಲ.
ಡಿಸಿಎಂ ಅವರೇ ಇತ್ತೀಚೆಗೆ ಹೇಳಿದ್ರು, ದೇವರೇ ಕೆಳಗೆ ಬಂದ್ರೂ ಬೆಂಗಳೂರನ್ನ ಸರಿ ಮಾಡಲು ಸಾಧ್ಯವಿಲ್ಲ ಅಂತ. ಬೆಂಗಳೂರಿಗೆ ದೇವರು ಕೆಳಗೆ ಬರಬೇಕಿಲ್ಲ. ಸರಿ ಮಾಡುವ ನಾಯಕತ್ವ, ಇಚ್ಛಾಶಕ್ತಿ ಸಾಕು. ಡಿಸಿಎಂಗೆ ಇರೋ ಅಧಿಕಾರ, ನನ್ನ ಬಳಿ ಇದ್ರೆ ಕೇವಲ ಒಂದೇ ವರ್ಷದಲ್ಲಿ ಸರಿ ಮಾಡುತ್ತೇನೆ ಎಂದು ಡಿಕೆಶಿಗೆ ಸವಾಲ್ ಹಾಕಿದ್ದಾರೆ.
120 ಕಿ. ಮೀ ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿಗೆ 8,480 ಕೋಟಿ ರೂ. ಆಗಿದೆ. ಸುರಂಗ ಕೊರೆದು 9.02 ಕಿ. ಮೀ ಅಟಲ್ ಸುರಂಗ ಮಾಡಲು 3,309 ಕೋಟಿ ರೂ. ಆಗಿದೆ. ಬೆಂಗಳೂರಿನ 18 ಕಿ.ಮೀ ಟನಲ್‌ಗೆ 18,500 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಟನೆಲ್ ರಸ್ತೆ ಯೋಜನೆಯಲ್ಲಿ ಭಂಡತನದಿಂದ ಹಗಲು ದರೋಡೆಗೆ ಸರ್ಕಾರ ಇಳಿದಿದೆ.
ಇಲ್ಲಿ ಟೆಂಡರ್ಗಳಲ್ಲಿ ಭ್ರಷ್ಟಾಚಾರ 40% ಗಿಂತಲೂ ಮೀರಿದೆ. ಪರ್ಸೆಂಟೇಜ್ 400%, 4000% ಗಿಂತಲೂ ದಾಟಿ ಹೋಗಿದೆ. ಇವರೇನು ಉಕ್ಕಿನಲ್ಲಿ ರಸ್ತೆ ಮಾಡ್ತಿದ್ದಾರಾ? ಸಿಮೆಂಟ್ನಲ್ಲಿ ಮಾಡ್ತಿದ್ದಾರಾ? ಚಿನ್ನದಲ್ಲಿ ರಸ್ತೆ ಮಾಡಿದ್ದಾರಾ? ಗೊತ್ತಿಲ್ಲ, ಅವರೇ ಹೇಳಬೇಕು ಎಂದಿದ್ದಾರೆ.