ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಬೆಳಿಗ್ಗೆ ವಿಶ್ವ ಪರಿಸರ ದಿನಾಚರಣೆ -2025 ಪರಿಸರ ನಡಿಗೆಗೆ ಚಾಲನೆ ನೀಡಿ, ಅಲ್ಲಿಂದ ವಿಧಾನಸೌಧಕ್ಕೆ ಸೈಕಲ್ ಸವಾರಿ ಮಾಡಿ ಪಾದಯಾತ್ರೆಯಲ್ಲಿ ಭಾಗವಹಿಸಿದರು.
Advertisement
ನಂತರ ಸೈಕಲ್ ಹೊಡೆಯುತ್ತಾ ಬರ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬ್ಯಾಲೆನ್ಸ್ ಮಿಸ್ ಕೆಳಗೆ ಬಿದ್ದಿದ್ದಾರೆ.
ವಿಧಾನಸೌಧದ ಮೆಟ್ಟಲುಗಳ ಮೇಲೆಯೇ ಡಿಸಿಎಂ ಡಿಕೆಶಿ ಜಾರಿ ಬಿದ್ದಿದ್ದು, ಪಕ್ಕದಲ್ಲೇ ಇದ್ದ ಬೆಂಬಲಿಗರು ಅವರ ಸಹಾಯಕ್ಕೆ ಬಂದು ಮೇಲಕ್ಕೆ ಎಬ್ಬಿಸಿದ್ದಾರೆ. ಸೈಕಲ್ ನಿಲ್ಲಿಸುವ ವೇಳೆಯಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದ ಡಿಕೆಶಿ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.