ಕಲಾವಿದರಿಗೆ ಡಿಸಿಎಂ ವಾರ್ನಿಂಗ್ ವಿಚಾರ: ಇದು ತಪ್ಪಲ್ಲ ಎಂದ ರಮ್ಯಾ!

0
Spread the love

ಬಳ್ಳಾರಿ:- ಕಲಾವಿದರಿಗೆ ಡಿಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್ ವಿಚಾರವಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಸಾಹೇಬರು ಹೇಳೋದ್ರಲ್ಲಿ ತಪ್ಪೇನಿಲ್ಲಾ. ನೀರಿನ ವಿಚಾರ ಬಂದಾಗ ಕಲಾವಿದರೆಲ್ಲರೂ ಬೆಂಬಲಿಸಬೇಕು. ಡಿಸಿಎಂ ಡಿಕೆ ಶಿವಕುಮಾರ್ ಅದನ್ನೇ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ. ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಕಲಾವಿದರು ಮಾತನಾಡಬೇಕು. ಡಾ.ರಾಜ್‌ಕುಮಾರ್ ನೆಲ, ಜಲ, ಭಾಷೆ ವಿಚಾರದಲ್ಲಿ ಹೋರಾಟ ಮಾಡಿದ್ದಾರೆ ಎಂದರು.

ಸದ್ಯ ನನಗೆ ಯಾವುದೇ ಹೊಸ ಚಲನಚಿತ್ರದ ನಟನೆ ಬಗ್ಗೆ ಯೋಜನೆಗಳಿಲ್ಲಾ. ಬಹಳ ದಿನಗಳ ಬಳಿಕ ಹಂಪಿಗೆ ಬಂದಿದ್ದೇನೆ. ನನಗೆ ಖುಷಿಯಾಗಿದೆ, ಸಂತೋಷವಾಗಿದೆ. ಸಚಿವ ಜಮೀರ್ ಅಹಮ್ಮದ್ ಮತ್ತು ವಿಜಯನಗರ ಜಿಲ್ಲಾಡಳಿತ ನನಗೆ ಆಹ್ವಾನ ನೀಡಿದೆ. ಹಾಗಾಗಿ ಬಂದಿದ್ದೇನೆ, ಖುಷಿಯಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here