ರಾಜ್ಯ ಸರ್ಕಾರಕ್ಕೆ ಡೆಡ್ ಲೈನ್: ಮುಷ್ಕರಕ್ಕೆ ಸಿದ್ಧತೆ ಕೈಗೊಂಡ ಖಾಸಗಿ ಸಾರಿಗೆ ಒಕ್ಕೂಟ!

0
Spread the love

ಬೆಂಗಳೂರು:- ವಿವಿಧ ಬೇಡಿಕೆ ಈಡೇರಿಸಲು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟವು ರಾಜ್ಯ ಸರ್ಕಾರಕ್ಕೆ ಮಾರ್ಚ್ 22ರ ಗಡುವು ನೀಡಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ಮುಷ್ಕರಕ್ಕೆ ಮುಂದಾಗುವುದಾಗಿ ಒಕ್ಕೂಟ ಹೇಳಿದೆ.

Advertisement

2023ರ ಸೆಪ್ಟೆಂಬರ್​ 12ರಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರಲ್ಲಿ ಖಾಸಗಿ ವಾಹನಗಳ ಸಾರಿಗೆ ಮುಷ್ಕರ ಮಾಡಲಾಗಿತ್ತು. ಈ ವೇಳೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿತ್ತು. ಆದರೆ ಅದರಲ್ಲಿ ಪ್ರಮುಖ ಬೇಡಿಕೆಗಳನ್ನು ಇಲ್ಲಿಯವರೆಗೆ ಈಡೇರಿಸಲು ಮುಂದಾಗಿಲ್ವಂತೆ. ಅದಕ್ಕೆ ಕರ್ನಾಟಕ ರಾಜ್ಯಾದ್ಯಂತ ಖಾಸಗಿ ಸಾರಿಗೆ ಮುಷ್ಕರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ, ಸಿಎಂ ಸಿದ್ದರಾಮಯ್ಯಗೆ ಮಾರ್ಚ್- 22 ರೊಳಗೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲಾಂದರೆ ಮಾ 24ಕ್ಕೆ ಮತ್ತೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಸಭೆ ಕರೆದು ಕರ್ನಾಟಕ ಸಾರಿಗೆ ಮುಷ್ಕರಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಕಳೆದ ಬಾರಿ ಬೆಂಗಳೂರು ಬಂದ್ ಮಾಡಿದ್ದೇವು. ಈ ಬಾರಿ ಕರ್ನಾಟಕ ಬಂದ್ ಮಾಡಬೇಕಾಗುತ್ತೆ. 4 ಬೇಡಿಕೆ ಈಡೇರಿಸಲು ಮಾರ್ಚ್ 22ರ ವರೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಗಡುವು ನೀಡಲಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ ಎಂದರೆ ಇಡೀ ಕರುನಾಡೇ ಸ್ತಬ್ಧ ಆಗಲಿದೆ. ಎಲ್ಲಾ ಸಾರಿಗೆ ವ್ಯವಸ್ಥೆ ಬಂದ್ ಆಗುತ್ತೆ ಆಟೋ, ಬಸ್, ಟ್ಯಾಕ್ಸಿ, ಸ್ಕೂಲ್ ಬಸ್ ಗೂಡ್ಸ್ ವಾಹನಗಳು ಬಂದ್ ಆಗುತ್ತೆ. 2023ರ ಬಂದ್​​ಗೆ 32 ಸಂಘಟನೆ ಬೆಂಬಲ ಕೊಟ್ಟಿತ್ತು. ಈ ಬಾರಿ 65 ರ ಸಂಘಟನೆ ಬೆಂಬಲ ಇದೆ. ನಮ್ಮ ಬೇಡಿಕೆ ಈಡೇರದಿದ್ದರೆ ಬಂದ್ ಮಾಡಿ ಖಾಸಗಿ ಒಕ್ಕೂಟದ ತಾಕತ್ತು ಏನೂ ಅನ್ನೋದನ್ನ ತೋರಿಸ್ತೇವೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.

ಬಂದ್ ಬಗ್ಗೆ ಗೊಂದಲ ಮಾಡಿಕೊಳ್ಳಲ್ಲ. ಎಕ್ಸಾಂ ದಿನಗಳನ್ನ ನೋಡಿ ಕರ್ನಾಟಕ ಬಂದ್ ನಿರ್ಧಾರ ಮಾಡುತ್ತೇವೆ. ಸಿಎಂ ಬಜೆಟ್​ನಲ್ಲಿ ಬ್ಯೂಸಿ ಇದ್ದಾರೆ. ಸಿಎಂ ಸಮಯ ಕೊಟ್ಟರೆ ಹೋಗಿ ಭೇಟಿಯಾಗಿ ಮಾತುಕತೆ ಮಾಡುತ್ತೇವೆ ಎಂದರು.


Spread the love

LEAVE A REPLY

Please enter your comment!
Please enter your name here