ಶಿವಮೊಗ್ಗ:- ರಸ್ತೆ ದಾಟುತ್ತಿದ್ದ ಬೈಕ್ ಸವಾರನ ಮೇಲೆ ಕಾರೊಂದು ಅಪ್ಪಳಿಸಿ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದಲ್ಲಿರುವ ಸೋಗಾನೆ ಬಳಿ ಜರುಗಿದೆ.
ಡೆಡ್ಲಿ ಆಕ್ಸಿಡೆಂಟ್ ನ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಸವಾರ ರಸ್ತೆ ದಾಟುವ ವೇಳೆ ಕಾರೊಂದು ಬೈಕ್ ಸವಾರನ ಮೇಲೆ ಅತೀ ವೇಗವಾಗಿ ಅಪ್ಪಳಿಸಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅಂಗಡಿಗೆ ನುಗಿದ್ದು, ಅಂಗಡಿಯಲ್ಲಿ ಕುಳಿತಿದ್ದ ವೃದ್ದೆ ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



